ಮಂಗಳೂರು: ಮಳೆ ಹಿನ್ನೆಲೆಯಲ್ಲಿ ಈ ಬಾರಿಯ ಮಂಗಳೂರು ದಸರಾ ರಜೆ ಕಡಿತಗೊಳಿಸಿದ್ದ ಸರ್ಕಾರ ತನ್ನ ಆದೇಶ ಹಿಂಪಡೆದಿದ್ದು, ಈ ಬಾರಿ ಎಂದಿನಂತೆ ದಸರಾ ರಜೆ ಇರಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ದಸರಾ ರಜೆಯಲ್ಲಿ ಯಾವುದೇ ಕಡಿತ ಇಲ್ಲ. ಶಿಕ್ಷಣ ಇಲಾಖೆಯ ಎಂದಿನ ತೀರ್ಮಾನದಂತೆ ರಜೆ ನೀಡಲಾಗುವುದು ಎಂದು ಹೇಳಿದ್ದಾರೆ. 

ಮಳೆ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ನೀಡಿದಕ್ಕಾಗಿ ದಸರಾ ರಜೆ ಕಡಿತ ಮಾಡಲಾಗಿತ್ತು. ಆದರೆ ಈ ಕುರಿತಾಗಿ ವಿರೋಧ ಬಂದ ಹಿನ್ನೆಲೆಯಲ್ಲಿ ಸರ್ಕಾರ ರಜೆ ಕಡಿತ ನಿರ್ಧಾರವನ್ನು ವಾಪಾಸ್ ಪಡೆದಿದೆ ಎಂದು ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.