ಲೋಕಸಭಾ ಚುನಾವಣೆಯೊಂದಿಗೆ ರಾಜ್ಯದಲ್ಲಿಯೂ ಕೂಡ ಚುನಾವಣೆ ನಡೆಯುವ ಬಗ್ಗೆ ಇದೀಗ ಕೇಂದ್ರ ಚುನಾವಣಾ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಕೂಡ ಒಂದೇ ಬಾರಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.  

ಔರಂಗಾಬಾದ್‌: ‘ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಏಕಕಾಲದಲ್ಲಿ ಚುನಾವಣೆ ನಡೆಯಲು ಸಾಧ್ಯವಿಲ್ಲ’ ಎಂದು ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್‌ ರಾವತ್‌ ಪುನರುಚ್ಚರಿಸಿದ್ದಾರೆ.

ಔರಂಗಾಬಾದ್‌ಗೆ ಗುರುವಾರ ಆಗಮಿಸಿದ್ದ ಅವರನ್ನು ಸುದ್ದಿಗಾರರು ಏಕಕಾಲದ ಚುನಾವಣೆ ಬಗ್ಗೆ ಪ್ರಶ್ನಿಸಿದರು. ಆಗ ರಾವತ್‌ ಅವರು ‘ಕೋಯಿ ಚಾನ್ಸ್‌ ನಹಿ’ (ಯಾವುದೇ ಸಾಧ್ಯತೆ ಇಲ್ಲ) ಎಂದು ಚುಟುಕಾಗಿ ಉತ್ತರಿಸಿದರು.

ಇತ್ತೀಚೆಗೆ ಮಾಧ್ಯಮ ಸಂದರ್ಶನ ವೇಳೆಯೂ ಇದೇ ಮಾತನ್ನು ಹೇಳಿದ್ದ ರಾವತ್‌, ‘ಏಕಕಾಲದ ಚುನಾವಣೆ ನಡೆಸಲು ಸಾಂವಿಧಾನಿಕ ತಿದ್ದುಪಡಿ ಆಗಬೇಕು. ಹೀಗಾಗಿ ಸದ್ಯದ ಮಟ್ಟಿಗೆ ಇದು ನೆರವೇರದು’ ಎಂದಿದ್ದರು.

ಮುಂದಿನ ಲೋಕಸಬೆ ಚುನಾವಣೆ ಂಏನಲ್ಲಿ ನಡೆಯಲಿದೆ. ಇನ್ನು ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಹಾಗೂ ಮಿಜೋರಂ ಚುನಾವಣೆಗಳು ವರ್ಷಾಂತ್ಯಕ್ಕೆ ನಡೆಯಬೇಕಿವೆ.