ಎಟಿಎಂಗಳಿಗೆ ಅಗತ್ಯವಿರುವ ಹಣವನ್ನು ಭರ್ತಿ ಮಾಡಲು ಬ್ಯಾಂಕ್‌ಗಳಿಗೆ ಸಾಧ್ಯವಾಗುತ್ತಿಲ್ಲ. ಹಳೆಯ ನೋಟುಗಳ ನಿಷೇಧ ಸಂದರ್ಭದಲ್ಲಿ ದಿನದ 24 ಗಂಟೆ ನೋಟು ಮುದ್ರಣದಲ್ಲಿ ತೊಡಗಿದ್ದ ಸಿಬ್ಬಂದಿ ಈಗ ಕೇವಲ ಒಂದೇ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರು(ಏ.10): ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ನೋಟುಗಳ ಮುದ್ರಣ ನಿರೀಕ್ಷಿತ ಮಟ್ಟದಲ್ಲಿ ನಡೆಯದೆ ಇರುವುದರಿಂದ ಬ್ಯಾಂಕ್‌ಗಳಿಗೆ ಅಗತ್ಯ ಪ್ರಮಾಣದಲ್ಲಿ ನೋಟುಗಳ ಸರಬರಾಜು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬಹುತೇಕ ರಾಷ್ಟ್ರೀಕೃತ ಬ್ಯಾಂಕ್‌ಗಳು ನೋಟಿನ ಅಭಾವವನ್ನು ಎದುರಿಸುತ್ತಿವೆ.
ಎಟಿಎಂಗಳಿಗೆ ಅಗತ್ಯವಿರುವ ಹಣವನ್ನು ಭರ್ತಿ ಮಾಡಲು ಬ್ಯಾಂಕ್‌ಗಳಿಗೆ ಸಾಧ್ಯವಾಗುತ್ತಿಲ್ಲ. ಹಳೆಯ ನೋಟುಗಳ ನಿಷೇಧ ಸಂದರ್ಭದಲ್ಲಿ ದಿನದ 24 ಗಂಟೆ ನೋಟು ಮುದ್ರಣದಲ್ಲಿ ತೊಡಗಿದ್ದ ಸಿಬ್ಬಂದಿ ಈಗ ಕೇವಲ ಒಂದೇ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಬೇಡಿಕೆಗೆ ಅನುಗುಣವಾಗಿ ನೋಟು ಮುದ್ರಿಸಿ ಸರಬರಾಜು ಮಾಡಲು, ಆರ್‌ಬಿಐ ವಿಫಲವಾಗಿರುವುದು ಎಟಿಎಂಗಳಲ್ಲಿ ಹಣಕಾಸಿನ ಕೊರತೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಈ ಮೊದಲು ಅಗತ್ಯಕ್ಕೆ ತಕ್ಕಂತೆ ಜನ ಎಟಿಎಂಗಳಿಂದ ಹಣ ಡ್ರಾ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಡ್ರಾಮಿತಿ ವಿಧಿಸಿ, ಶುಲ್ಕ ವಿಧಿಸಲಾಗುತ್ತಿರುವದರಿಂದ ಒಮ್ಮೆಗೆ ಹೆಚ್ಚು ಹಣ ಡ್ರಾ ಮಾಡ್ತಿದ್ದಾರೆ. ಹಣಕ್ಕಾಗಿ ಮತ್ತೆ ಜನರ ಪರದಾಟ ಮುಂದುವರಿದಿದ್ದು ಬಹುತೇಕ ಎಟಿಎಂಗಳ ಮುಂದೆ ನೋ ಕ್ಯಾಷ್ ಬೋರ್ಡ್ ಕಾಣುತ್ತಿವೆ.
