ಮೊದಲನೆಯದಾಗಿ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡದಿರಲು ನಿರ್ಧರಿಸಲಾಯ್ತು. ಒಂದು ವೇಳೆ ಸಂಪುಟದಿಂದ ಸಚಿವರನ್ನು ಕೈಬಿಟ್ಟರೆ, ಆಡಳಿತ ಯಂತ್ರ ಹಿಡಿತ ತಪ್ಪಿ, ಮತ್ತೆ ಅಸಮಾಧಾನ, ಗೊಂದಲ ಸೃಷ್ಟಿಯಾಗಲಿದೆ. ಹಾಗಾಗಿ ಸಂಪುಟ ಪುನಾರಚನೆ ಸಾಹಸ ಬೇಡ ಎಂದು ನಿರ್ಧರಿಸಲಾಯ್ತು.
ಬೆಂಗಳೂರು (ಫೆ.26): ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಡೆದಿದ್ದು, ಕೆಲ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಮೊದಲನೆಯದಾಗಿ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡದಿರಲು ನಿರ್ಧರಿಸಲಾಯ್ತು. ಒಂದು ವೇಳೆ ಸಂಪುಟದಿಂದ ಸಚಿವರನ್ನು ಕೈಬಿಟ್ಟರೆ, ಆಡಳಿತ ಯಂತ್ರ ಹಿಡಿತ ತಪ್ಪಿ, ಮತ್ತೆ ಅಸಮಾಧಾನ, ಗೊಂದಲ ಸೃಷ್ಟಿಯಾಗಲಿದೆ. ಹಾಗಾಗಿ ಸಂಪುಟ ಪುನಾರಚನೆ ಸಾಹಸ ಬೇಡ ಎಂದು ನಿರ್ಧರಿಸಲಾಯ್ತು.
ಖಾಲಿ ಇರುವ ಎರಡು ಸಚಿವ ಸ್ಥಾನಗಳಿಗೆ ನೇಮಕ ಮಾಡಲು ಸಹಮತ ವ್ಯಕ್ತವಾಯ್ತು. ಇದುವರೆಗೆ ಈಡೇರಿಸದ ಆಶ್ವಾಸನೆಗಳ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಯ್ತು. ಕೆಪಿಸಿಸಿ ಹೊಸ ಸ್ವರೂಪ ಕೋಡುವುದಾಗಿ ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ದಿಗ್ವಿಜಯ್ ಸಿಂಗ್ ಸುಳಿವು ನೀಡಿದರು.