ಸಚಿವ ಸ್ಥಾನದ ಆಸೆಯಲ್ಲಿದ್ದವರಿಗೆ ಡಿಸಿಎಂ ಶಾಕ್ ಕೊಟ್ರು!

No Cabinet expansion  DCM Dr G.Parameshwar
Highlights

ಸಚಿವ ಸ್ಥಾನದ ಆಸೆಯಲ್ಲಿ ಮುಸುಕಿನ ಗುದ್ದಾಟ ಮಾಡುತ್ತಿದ್ದ ಕಾಂಗ್ರೆಸ್ ಶಾಸಕರಿಗೆ ಡಿಸಿಎಂ ಪರಮೇಶ್ವರ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಭೇಟಿ ಮಾಡಿದ ಪರಮೇಶ್ವರ ಏನು ಹೇಳಿದ್ರು?

ಬೆಂಗಳೂರು [ಜೂನ್ 20] ಸಚಿವ ಸಂಪುಟ ವಿಸ್ತರಣೆ ಮಾಡಲು ಸಿಎಂ ಕುಮಾರಸ್ವಾಮಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಹೈಕಮಾಂಡ್  ಭೇಟಿ ಮಾಡಿದ ಡಿಸಿಎಂ ಪರಮೇಶ್ವರ ಕುಮಾರಸ್ವಾಮಿ ಸಲಹೆ ಜಾರಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅತೃಪ್ತರು ಈಗ ಸುಮ್ಮನಾಗಿದ್ದಾರೆ. ಸದ್ಯಕ್ಕೆ ಪಕ್ಷದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಮತ್ತ ಸಂಪುಟ ವಿಸ್ತರಣೆಯ ಪ್ರಯತ್ನ ಮುಂದುವರಿಸಿದರೆ ಅನಗತ್ಯವಾಗಿ ತೊಂದರೆಯಾಗಲಿದೆ. ಬಜೆಟ್ ಅಧಿವೇಶನದ ಬಳಿಕವೇ ಸಂಪುಟ ವಿಸ್ತರಣೆ ಮಾಡುವುದು ಸೂಕ್ತ ಎಂದು ಪರಮೇಶ್ವರ ಹೇಳಿದ್ದಾರೆ.

ಬಜೆಟ್ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡುವುದು ಒಳಿತು. ಅಧಿವೇಶನದಲ್ಲಿ ಅತೃಪ್ತರಿಂದ ತೊಂದರೆಯಾಗುವ ಆತಂಕವಿದೆ ಎಂದು ಕುಮಾರಸ್ವಾಮಿ ರಾಹುಲ್ ಬಳಿ ಹೇಳಿಕೊಂಡಿದ್ದರು.

ಇದೀಗ ಹೈಕಮಾಂಡ್ ಗೆ ಡಾ.ಜಿ.ಪರಮೇಶ್ವರ ವರದಿ ನೀಡಿದ್ದು ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವುದು ಖಾತ್ರಿಯಾಗಿದೆ. ಇನ್ನೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧದ ನಡುವೆಯೂ ಬಜೆಟ್ ಮಂಡನೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದರು.

 

loader