ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳು ಸ್ಥಗಿತಗೊಳಿಸಿದರೆ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ತಮಿಳು ಸಿನಿಮಾಗಳು ಸ್ಥಗಿತಗೊಳಿಸುತ್ತೇವೆ ಎಂದು ಈ ಸಂದರ್ಭದಲ್ಲಿ ವಾಟಾಳ್ ಹೇಳಿದ್ದಾರೆ.
ಬೆಂಗಳೂರು (ಏ.22): ನಟ ಸತ್ಯರಾಜ್ ಕೇಳಿರುವ ವಿಷಾದ ಹಾಗೂ ಕ್ಷಮೆಯಾಚನೆ ಹಿನ್ನೆಲೆಯಲ್ಲಿ ಹೋರಾಟವನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳು ಸ್ಥಗಿತಗೊಳಿಸಿದರೆ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ತಮಿಳು ಸಿನಿಮಾಗಳು ಸ್ಥಗಿತಗೊಳಿಸುತ್ತೇವೆ ಎಂದು ಈ ಸಂದರ್ಭದಲ್ಲಿ ವಾಟಾಳ್ ಹೇಳಿದ್ದಾರೆ.
ಇನ್ಮುಂದೆ ಸತ್ಯರಾಜ್ ಎಲ್ಲಿಯೂ ಹೀಗೆ ಮಾತನಾಡಬಾರದು, ಮಾತನಾಡುವ ಮುನ್ನ ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು, ಇಲ್ಲದಿದ್ದರೆ ಸತ್ಯರಾಜ್ ಅಭಿನಯದ ಚಿತ್ರಗಳಿಗೆ ನಿಷೇಧ ಹಾಕಲಾಗುತ್ತೆ, ಎಂದು ವಾಟಾಳೆ ಎಚ್ಚರಿಸಿದ್ದಾರೆ.
ಕನ್ನಡಪರ ಸಂಘಟನೆಗಳ ಈ ನಿರ್ಧಾರದೊಂದಿಗೆ ಬಾಹುಬಲಿ-2 ಸಿನಿಮಾ 28ರಂದು ಕರ್ನಾಟಕದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.