ಸಿಯಾಚಿನ್ ಪ್ರದೇಶದಲ್ಲಿ ಪಾಕಿಸ್ತಾನ ಯುದ್ಧ ವಿಮಾನಗಳು ಹಾರಾಡಿವೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದ್ದು ಭಾರತೀಯ ವಾಯುಪಡೆ ಇದನ್ನು ನಿರಾಕರಿಸಿದೆ. ಭಾರತದ ವಾಯುನೆಲೆಯನ್ನು ದಾಟಿ ಯಾವುದೇ ವಿಮಾನ ಬಂದಿಲ್ಲವೆಂದು ವಾಯುಸೇನೆ ಸ್ಪಷ್ಟನೆ ನೀಡಿದೆ.

ನವದೆಹಲಿ (ಮೇ.24): ಸಿಯಾಚಿನ್ ಪ್ರದೇಶದಲ್ಲಿ ಪಾಕಿಸ್ತಾನ ಯುದ್ಧ ವಿಮಾನಗಳು ಹಾರಾಡಿವೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದ್ದು ಭಾರತೀಯ ವಾಯುಪಡೆ ಇದನ್ನು ನಿರಾಕರಿಸಿದೆ. ಭಾರತದ ವಾಯುನೆಲೆಯನ್ನು ದಾಟಿ ಯಾವುದೇ ವಿಮಾನ ಬಂದಿಲ್ಲವೆಂದು ವಾಯುಸೇನೆ ಸ್ಪಷ್ಟನೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ಬೆಳಗಿನ ಜಾವ ಸಿಯಾಚಿನ್ ಪ್ರದೇಶಗಳಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ಹಾರಾಡಿವೆ. ಪಾಕ್ ಏರ್ ಚೀಫ್ ಮಾರ್ಷಲ್ ಸೋಹೈಲ್ ಅಮನ್ ಸ್ಕರ್ದುಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದನ್ನು ಭಾರತದ ವಾಯುಸೇನೆ ತಳ್ಳಿ ಹಾಕಿದೆ.

ಭಾರತದ ಗಡಿಯೊಳಗೆ ನುಸುಳಿ ಯೋಧರ ಶಿರಚ್ಛೇದದ ನಂತರ ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಉಗ್ರರ ಒಳನುಸುಳುವಿಕೆಗೆ ನೆರವು ನೀಡುತ್ತಿದ್ದ ಪಾಕಿಸ್ತಾನದ ಸೇನಾ ಪೋಸ್ಟ್ ಗಳು ಹಾಗೂ ಬಂಕರ್ ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿ ಕೊನೆಗೂ ದಿಟ್ಟ ಪ್ರತ್ಯುತ್ತರ ನೀಡಿದೆ. ಈ ಹಿನ್ನಲೆಯಲ್ಲಿ ಪಾಕ್ ಮಾಧ್ಯಮಗಳು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿರಬಹುದಾದ ಸಾಧ್ಯತೆಯಿದೆ.