‘ರಾಷ್ಟ್ರಧರ್ಮ' 2016ರಿಂದ 2017ರವರೆಗೆ ಮುದ್ರಿತ ಪ್ರತಿಯನ್ನು ಡಿಎವಿಪಿಗೆ ಕಳುಹಿಸಿ ಕೊಡದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ

ನವದೆಹಲಿ: ಆರ್‌ಎಸ್‌ಎಸ್‌ ಮುಖವಾಣಿ ‘ರಾಷ್ಟ್ರ ಧರ್ಮ'ವನ್ನು ದೃಶ್ಯ ಪ್ರಚಾರ ಮತ್ತು ಜಾಹೀರಾತು ನಿರ್ದೇಶನಾಲಯ(ಡಿಎವಿಪಿ)ದ ಪಟ್ಟಿಯಿಂದ ಅಮಾನತು ಮಾಡಲಾಗಿದೆ.

ಹೀಗಾಗಿ ‘ರಾಷ್ಟ್ರಧರ್ಮ' ಮಾಸಿಕಕ್ಕೆ ಇನ್ನು ಕೇಂದ್ರ ಸರ್ಕಾರದ ಜಾಹೀರಾತು ಲಭ್ಯವಾಗುವುದಿಲ್ಲ.

ನಿಯಮಗಳ ಅನ್ವಯ ಎಲ್ಲಾ ಮುದ್ರಣ ಸಂಸ್ಥೆಗಳು, ತಮ್ಮ ಪ್ರಸಾರದ ದೃಢೀಕರಣಕ್ಕಾಗಿ ಮುದ್ರಿತ ಪ್ರತಿಯನ್ನು ಡಿಎವಿಪಿಗೆ ಕಳುಹಿಸಿಕೊಡಬೇಕು. ಆದರೆ ‘ರಾಷ್ಟ್ರಧರ್ಮ' 2016ರಿಂದ 2017ರವರೆಗೆ ಮುದ್ರಿತ ಪ್ರತಿ ಕಳುಹಿಸಿರಲಿಲ್ಲ. ಹೀಗಾಗಿ ಜಾಹೀರಾತು ಸಿಗಲ್ಲ.