ಕನ್ನಡ ಚಿತ್ರಗಳಿಗೆ ಎಸಿ ಹಾಕುವುದಿಲ್ಲ. ಸಿನಿಮಾ ನೋಡುವವರು ನೋಡಬಹುದು ಇಲ್ಲದಿದ್ದರೆ ಎದ್ದು ಹೋಗಬಹುದು ಎಂದಿದ್ದಕ್ಕೆ ಮಾಲ್‌'ನ ವಿರುದ್ಧ ಗಲಾಟೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು(ಎ.08): ಕನ್ನಡ ಚಿತ್ರಗಳಿಗೆ ಎಸಿ ಹಾಕುವುದಿಲ್ಲ. ಸಿನಿಮಾ ನೋಡುವವರು ನೋಡಬಹುದು ಇಲ್ಲದಿದ್ದರೆ ಎದ್ದು ಹೋಗಬಹುದು ಎಂದಿದ್ದಕ್ಕೆ ಮಾಲ್‌'ನ ವಿರುದ್ಧ ಗಲಾಟೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಾಗಾವಾರ ಬಳಿ ಇರುವ ಎಲಿಮೆಂಟ್​ ಮಾಲ್‌'ನಲ್ಲಿರುವ ಪಿವಿಆರ್‌'ನಲ್ಲಿ ರಾಜಕುಮಾರ ಚಲನಚಿತ್ರ ಪ್ರದರ್ಶನ ಆಗುತ್ತಿತ್ತು. ಚಿತ್ರ ಪ್ರಾರಂಭವಾಗಿ ಅರ್ಧ ತಾಸು ಕಳೆದರೂ ಎಸಿಯನ್ನು ಮಾತ್ರ ಆನ್ ಮಾಡಿರಲಿಲ್ಲ. ನೋಡಿ ನೋಡಿ ಬೇಸತ್ತ ಪ್ರೇಕ್ಷಕರು ಎಸಿ ಆನ್ ಮಾಡಿ ಅಂತ ಮಾಲ್ ಅವರನ್ನು ಕೇಳಲು ಹೋಗಿದ್ದಾರೆ. ಇದಕ್ಕೆ ಉದ್ದಟವಾಗಿ ಉತ್ತರ ನೀಡ ಮಾಲ್‌'ನ ಸಿಬ್ಬಂದಿ ಕನ್ನಡ ಚಲನಚಿತ್ರಗಳಿಗೆಲ್ಲಾ ಎಸಿ ಹಾಕೋಕೆ ಆಗುವುದಿಲ್ಲ. ಸಿನಿಮಾ ನೋಡುವವರು ನೋಡಬಹುದು ಇಲ್ಲ ಎದ್ದು ಮನೆಗೆ ಹೋಗಬಹುದು ಎಂದಿದ್ದಾರೆ.

ಇದರಿಂದ ಕೋಪಗೊಂಡ ಪ್ರೇಕ್ಷಕರು ಮಾಲ್‌ನಲ್ಲಿ ಗಲಾಟೆ ಮಾಡಿ, ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಅಂತ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.