ನಿತ್ಯಾನಂದ ರಾಸಲೀಲೆ; ಅತ್ಯಾಚಾರವಾ? ಒಪ್ಪಿತ ಲೈಂಗಿಕ ಕ್ರಿಯೆಯಾ?

First Published 17, Mar 2018, 1:16 PM IST
Nityananda Sex Scandal
Highlights

ಬಿಡದಿ ನಿತ್ಯಾನಂದನ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. 

ಬೆಂಗಳೂರು (ಮಾ. 17):  ಬಿಡದಿ ನಿತ್ಯಾನಂದನ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. 

ಪ್ರಾಸಿಕ್ಯೂಷನ್‌ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಂತ್ರಸ್ತೆಯು ಆರೋಪಿ ನಿತ್ಯಾನಂದ ಸ್ವಾಮೀಜಿ  ಜೊತೆ ಒಪ್ಪಿತ ಲೈಂಗಿಕ ಕ್ರಿಯೆ ನಡೆಸಿದ್ದಾಳೆ ಎಂದೇ ಹೇಳಬೇಕಾಗುತ್ತದೆ ಎಂದು  ನಿತ್ಯಾನಂದ ಸ್ವಾಮೀಜಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಹೈಕೋರ್ಟ್‌ನಲ್ಲಿ ವಾದ  ಮಂಡಿಸಿದ್ದಾರೆ. 

ಅತ್ಯಾಚಾರ ಆರೋಪದಲ್ಲಿ ದೋಷಮುಕ್ತಿ ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿರುವ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.   ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್‌  ನೇತೃತ್ವದ  ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದೆ.  ಸಂತ್ರಸ್ತೆ ಮತ್ತು ಸಾಕ್ಷೀದಾರರೊಬ್ಬರ ನಡುವೆ ನಡೆದಿರುವ ಇ-ಮೇಲ್ ಸಂಭಾಷಣೆಯನ್ನು ಗಮನಿಸಿದರೆ ಆಕೆಯ ಮೇಲೆ ಆಶ್ರಮದಲ್ಲಿ ಅತ್ಯಾಚಾರ ನಡೆದೇ ಇಲ್ಲ.  ಆದರೆ, ಪ್ರಾಸಿಕ್ಯೂಷನ್‌ ಸಂಗ್ರಹಿಸಿರುವ ದಾಖಲೆಗಳನ್ನು ಗಮನಿಸಿದರೆ ಇದೊಂದು ಒಪ್ಪಿತ ಲೈಂಗಿಕ ಕ್ರಿಯೆ ಎಂದೇ ಪರಿಗಣಿಸಬೇಕಾಗುತ್ತದೆ.  ಅತ್ಯಾಚಾರದ ಆರೋಪ ಎಲ್ಲಿಂದ ಬಂತು’ ಎಂದು ಸಿ.ವಿ.ನಾಗೇಶ್ ವಾದ ಮಂಡಿಸಿದ್ದಾರೆ. 

ಪ್ರಾಸಿಕ್ಯೂಷನ್‌ ಪರ ಸಂದೇಶ್ ಜಿ. ಚೌಟ ವಾದ ಮಂಡಿಸಿ ಪ್ರಕರಣದ ಹಂತಗಳನ್ನು ವಿವರಿಸಿದರು.  ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಲಾಗಿದೆ. 
 

loader