ತೀಶ್ ಕುಮಾರ್ ನೇತೃತ್ವದ ಎನ್'ಡಿಏ ಸರ್ಕಾರ ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದೆ. ವಿಧಾನಸಭೆಯ ಒಂದು ದಿನದ ವಿಶೇಷಾಧಿವೇಶನವನ್ನು ನಾಳೆ ಕರೆಯಲಾಗಿದ್ದು, ಹೊಸ ಸರ್ಕಾರವು ವಿಶ್ವಾಸ ಮತಯಾಚನೆ ಮಾಡಲಿದೆ ಎಂದು ಪ್ರಧಾನ ಸಂಪುಟ ಕಾರ್ಯದರ್ಶಿ ಬೃಜೇಶ್ ಮಹ್ರೋತ್ರಾ ಹೇಳಿದ್ದಾರೆ.

ಪಾಟ್ನಾ: ನಿತೀಶ್ ಕುಮಾರ್ ನೇತೃತ್ವದ ಎನ್'ಡಿಏ ಸರ್ಕಾರ ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದೆ.

ವಿಧಾನಸಭೆಯ ಒಂದು ದಿನದ ವಿಶೇಷಾಧಿವೇಶನವನ್ನು ನಾಳೆ ಕರೆಯಲಾಗಿದ್ದು, ಹೊಸ ಸರ್ಕಾರವು ವಿಶ್ವಾಸ ಮತಯಾಚನೆ ಮಾಡಲಿದೆ ಎಂದು ಪ್ರಧಾನ ಸಂಪುಟ ಕಾರ್ಯದರ್ಶಿ ಬೃಜೇಶ್ ಮಹ್ರೋತ್ರಾ ಹೇಳಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ-ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಜೊತೆ ನಡೆದ ಸಭೆಯಲ್ಲಿ 2 ಅಜೆಂಡಾಗಳನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಮಹಾಮೈತ್ರಿ ಸರ್ಕಾರ ಜು. 28 ರಿಂದ ಆ.03ರವರೆಗೆ ಕರೆದಿದ್ದ ವಿಧಾನ ಮಂಡಲದ ಮುಂಗಾರು ಅಧಿವೇಶನವನ್ನು ರದ್ದುಪಡಿಸುವುದು ಹಾಗೂ ವಿಶ್ವಾಸ ಮತ ಯಾಚನೆ ನಾಳಿನ ಕಲಾಪದ ಭಾಗವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಬಿಹಾರ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ 2 ದಿನಗಳೊಳಗೆ ಬಹುಮತ ಸಾಬೀತು ಪಡಿಸುವಂತೆ ನಿತೀಶ್ ಕುಮಾರ್'ಗೆ ಸೂಚಿಸಿದ್ದರು.

ಇದೇ ವೇಳೆ ಆರ್'ಜೆಡಿ ರಾಜ್ಯಪಾಲವರ ಕ್ರಮವನ್ನು ಸುಪ್ರೀಂ ಕೋರ್ಟ್'ನಲ್ಲಿ ಪ್ರಶ್ನಿಸಲು ತಯಾರಿ ನಡೆಸಿದೆ.