ನವದೆಹಲಿ (ನ.27): ಕೇಂದ್ರ ಸರ್ಕಾರ ರೂ.500, 1000 ನೋಟುಗಳನ್ನು ಅಮಾನ್ಯ ಮಾಡಿರುವ ಕ್ರಮವನ್ನು ಖಂಡಿಸಿ, ನಾಳೆ ವಿಪಕ್ಷಗಳು ಭಾರತ್​​ ಬಂದ್​ಗೆ ಕರೆ ನೀಡಿವೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್  ಸೇರಿದಂತೆ ಹಲವು ವಿಪಕ್ಷ ನಾಯಕರು ಬಂದ್​’ಗೆ  ಬೆಂಬಲ ಸೂಚಿಸಿದ್ದಾರೆ. ಆದರೆ ಜೆಡಿಯು ಮುಖಂಡ ಹಾಗೂ ಬಿಹಾರ್​​ ಸಿಎಂ ನಿತೀಶ್ ಕುಮಾರ್ ಮಾತ್ರ ಪ್ರಧಾನಿ ಮೋದಿಗೆ  ಬೆಂಬಲ ಸೂಚಿಸಿದ್ದಾರೆ.

ಇವತ್ತು ಪಕ್ಷದ ಸಭೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ನಿತೀಶ್​​ಕುಮಾರ್​​ ಪ್ರಧಾನಿ ನೋಟ್​​ನಿಷೇಧ ಮಾಡಿರುವುದರಿಂದ ಕಪ್ಪು ಹಣ ತಡೆಯಲು ಸಾಧ್ಯವಾಗುತ್ತದೆ, ಹಾಗಾಗಿ ನಾಳೆ ನಡೆಯುವ ಬಂದ್​ಗೆ ನನ್ನ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.