ಕಳೆದ ಲೋಕಸಭಾ ಚುನಾವಣೆಯಿಂದ ಐತಿಹಾಸಿಕ ಸರಣಿ ಸೋಲಿಗೆ ಸಿಲುಕಿರುವ ಕಾಂಗ್ರೆಸ್‌ನ ಪುನಶ್ಚೇತನಕ್ಕಾಗಿ ನಾಯಕತ್ವದ ಬದಲಾವಣೆಯಾಗಬೇಕಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ ಪ್ರತಿಪಾದಿಸಿದ್ದಾರೆ.
ನವದೆಹಲಿ(ಜು.13): ಕಳೆದ ಲೋಕಸಭಾ ಚುನಾವಣೆಯಿಂದ ಐತಿಹಾಸಿಕ ಸರಣಿ ಸೋಲಿಗೆ ಸಿಲುಕಿರುವ ಕಾಂಗ್ರೆಸ್ನ ಪುನಶ್ಚೇತನಕ್ಕಾಗಿ ನಾಯಕತ್ವದ ಬದಲಾವಣೆಯಾಗಬೇಕಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ ಪ್ರತಿಪಾದಿಸಿದ್ದಾರೆ.
ದೆಹಲಿಯಲ್ಲಿ ‘ಇಂಡಿಯಾಆಫ್ಟರ್ ಗಾಂಧಿ’(ಗಾಂಧಿ ನಂತರದ ಭಾರತ) ೧೦ನೇ ವಾರ್ಷಿಕ ಆವೃತ್ತಿ ಪುಸ್ತಕ ಅನಾವರಣಗೊಳಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ನಾಯಕತ್ವವಿಲ್ಲದ ಪಕ್ಷವಾಗಿದ್ದು, ನಿತೀಶ್ ಪಕ್ಷವಿಲ್ಲದ ನಾಯಕ ಎನಿಸಿದ್ದಾರೆ.ನಿತೀಶ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ದೊರೆಯದ ಹೊರತು ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ನಿತೀಶ್ ಮತ್ತು ಸೋನಿಯಾ ಗಾಂಧಿ ಅವರಿಗೆ ಭವಿಷ್ಯವಿಲ್ಲ,’ ಎಂದು ಗುಹಾ ಹೇಳಿದ್ದಾರೆ.
