ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಲಾಲು ಪ್ರಸಾದ್ ಯಾದವ್ ಹಾಗೂ ಕಾಂಗ್ರೆಸ್  ಮೈತ್ರಿ ಜೊತೆ ಕೆಲಸ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ಬೇರೆ ದಾರಿಯೇ ಇಲ್ಲದೇ ರಾಜಿನಾಮೆ ನೀಡಿದ್ದೇನೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ನವದೆಹಲಿ (ಜು.26): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಲಾಲು ಪ್ರಸಾದ್ ಯಾದವ್ ಹಾಗೂ ಕಾಂಗ್ರೆಸ್ಮೈತ್ರಿ ಜೊತೆ ಕೆಲಸ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ಬೇರೆ ದಾರಿಯೇ ಇಲ್ಲದೇ ರಾಜಿನಾಮೆ ನೀಡಿದ್ದೇನೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

20 ತಿಂಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಲು ಪ್ರಯತ್ನಿಸಿದ್ದೇನೆ. ಆರ್’ಜೆಡಿ ನಾಯಕರ ಮೇಲೆ ಎದ್ದಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ವಿವರಣೆ ನೀಡುವಂತೆ ನಾವವರನ್ನು ಕೇಳಿದ್ದೇವೆ. ತೇಜಸ್ವಿ ಯಾದವ್’ರನ್ನು ಕೂಡಾ ಭೇಟಿ ಮಾಡಿ ಮಾಡಿ ಮಾತುಕತೆ ನಡೆಸಿದ್ದೇನೆ. ಅವರ ಮೇಲೆ ಬಂದಿರುವ ಆರೋಪದ ಬಗ್ಗೆ ಸ್ಪಷ್ಟಿಕರಣ ನೀಡಬೇಕಾಗಿತ್ತು. ಆದರೆ ಅವರು ನೀಡಲಿಲ್ಲ. ಹೀಗಾಗಿ ಇವರ ಮೈತ್ರಿ ಜೊತೆ ಕೆಲಸ ಮಾಡುವುದು ನನಗೆ ಕಷ್ಟವಾಯಿತು. ನಾವು ಮಹಾಮೈತ್ರಿ ಧರ್ಮವನ್ನು ಪಾಲಿಸಿದ್ದೇವೆ. ಆದರೆ ಅವರು ಪಾಲಿಸಲಿಲ್ಲ. ಹಾಗಾಗಿ ಇದರಲ್ಲೇ ಮುಂದುವರೆಯಲು ನನ್ನ ತ್ಮಸಾಕ್ಷಿ ಒಪ್ಪಲಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆಗೂ ಕೂಡಾ ಈ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇನೆ. ಅದೇ ರೀತಿ ಬಿಹಾರದಲ್ಲಿರುವ ಇತರೆ ಕಾಂಗ್ರೆಸ್ ಮುಖಂಡರೊಂದಿಗೆ ಮಾತನಾಡಿ, ಪರಿಹಾರ ಹುಡುಕುವ ಬಗ್ಗೆ ಕೇಳಿದ್ದೇನೆ. ಅವರೂ ಕೂಡಾ ಸ್ಪಂದಿಸಲಿಲ್ಲ.ಆದ್ದರಿಂದ ನಾನೇ ಮೈತ್ರಿಯಿಂದ ದೂರ ಉಳಿದೆ ಎಂದಿದ್ದಾರೆ.