ಬಿಜೆಪಿಗೆ ಮತ್ತೆ ನಿತೀಶ್‌ ಗುಡ್‌ ಬೈ..? ಎನ್‌ಡಿಗೆ ಮತ್ತೊಂದು ಹಿನ್ನಡೆ

Nitish Kumar May leave BJP
Highlights

4 ವರ್ಷಗ ಹಿಂದೆ ಎನ್‌ಡಿಎ ಮೈತ್ರಿಕೂಟಕ್ಕೆ ವಿದಾಯ, ಕಳೆದ ವರ್ಷದ ಆಗಸ್ಟ್‌ನಲ್ಲೇ ಮತ್ತೆ ಎನ್‌ಡಿಎಗೆ ಸೇರಿದ್ದ ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಮತ್ತೆ ಎನ್‌ಡಿಎಗೆ ಗುಡ್‌ಬೈ ಹೇಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ನವದೆಹಲಿ: 4 ವರ್ಷಗ ಹಿಂದೆ ಎನ್‌ಡಿಎ ಮೈತ್ರಿಕೂಟಕ್ಕೆ ವಿದಾಯ, ಕಳೆದ ವರ್ಷದ ಆಗಸ್ಟ್‌ನಲ್ಲೇ ಮತ್ತೆ ಎನ್‌ಡಿಎಗೆ ಸೇರಿದ್ದ ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಮತ್ತೆ ಎನ್‌ಡಿಎಗೆ ಗುಡ್‌ಬೈ ಹೇಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. 

ಈ ನಿಟ್ಟಿನಲ್ಲಿ ಈಗಾಗಲೇ ಅವರು ತಮ್ಮ ದೂತರನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಬಳಿ ಕಳುಹಿಸಿದ್ದು, ಇಬ್ಬರ ನಡುವೆ ಒಂದು ಸುತ್ತಿನ ಮಾತುಕತೆಯಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೆ ನಿತೀಶ್‌ ಈ ನಿಲುವನ್ನು ಈಗಾಗಲೇ ಕಾಂಗ್ರೆಸ್‌ ಸೇರಿದಂತೆ ಇತರೆ ಕೆಲವು ಪಕ್ಷಗಳ ನಾಯಕರಿಗೂ ಲಾಲು ರವಾನಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ನಡುವೆಯೇ ನಮ್ಮ ಜೊತೆಯ ಮೈತ್ರಿಯ ಬಾಗಿಲು ನಿತೀಶ್‌ಗೆ ಮುಚ್ಚಿದೆ ಎಂದು ಆರ್‌ಜೆಡಿ ನಾಯಕ, ಲಾಲು ಪುತ್ರ ತೇಜಸ್ವಿ ಯಾದವ್‌ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ. 

ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್‌ ಹಾಗೂ ಇತರೆ ಕೆಲ ಸಣ್ಣ ಪಕ್ಷಗಳು ಮೈತ್ರಿಮಾಡಿಕೊಂಡು ಅಧಿಕಾರಕ್ಕೆ ಏರುವಲ್ಲಿ ಸಫಲವಾಗಿದ್ದವು. ಆದರೆ ನಂತರ ಮೈತ್ರಿಕೂಟಕ್ಕೆ ನಿತೀಶ್‌ ವಿದಾಯ ಹೇಳಿ ಎನ್‌ಡಿಎ ಸೇರಿದ್ದರು.

loader