ಬಿಹಾರದ ಮಾಜಿ ಆರೋಗ್ಯ ಸಚಿವ  ಹಾಗೂ ರಾಷ್ಟ್ರೀಯ ಜನತಾ ದಳ ಮುಖಂಡ  ತೇಜ್ ಪ್ರತಾಪ್ ಯಾದವ್ ಇದೀಗ  ತಮ್ಮ ಸರ್ಕಾರಿ ಬಂಗಲೆಯನ್ನು ತೊರೆದಿದ್ದಕ್ಕೆ ಕಾರಣವೇನೆಂದು ಹೇಳಿಕೆ ನೀಡಿದ್ದಾರೆ.

ಪಾಟ್ನಾ : ಬಿಹಾರದ ಮಾಜಿ ಆರೋಗ್ಯ ಸಚಿವ ಹಾಗೂ ರಾಷ್ಟ್ರೀಯ ಜನತಾ ದಳ ಮುಖಂಡ ತೇಜ್ ಪ್ರತಾಪ್ ಯಾದವ್ ಇದೀಗ ತಮ್ಮ ಸರ್ಕಾರಿ ಬಂಗಲೆಯನ್ನು ತೊರೆದಿದ್ದಕ್ಕೆ ಕಾರಣವೇನೆಂದು ಹೇಳಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

 ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರೇ ತಾವು ಬಂಗಲೆ ತೊರೆಯಲು ಕಾರಣ ಎಂದು ಹೇಳಿದ್ದಾರೆ.

ತಮ್ಮ ಸರ್ಕಾರಿ ಬಂಗಲೆಯಲ್ಲಿ ಇಬ್ಬರೂ ಸೇರಿ ದೆವ್ವವನ್ನು ಬಿಟ್ಟಿದ್ದರು. ಆದ್ದರಿಂದ ತಾವು ಬಂಗಲೆ ತೊರೆದಿದ್ದು, ತಮ್ಮನ್ನು ಕೊಲ್ಲಲು ಅವರು ಈ ಯತ್ನ ಮಾಡಿದ್ದರು ಎಂದು ತೇಜ್ ಪ್ರತಾಪ್ ಯಾದವ್ ಆರೋಪ ಮಾಡಿದ್ದಾರೆ.