ನಿತೀಶ್‌ ಕುಮಾರ್‌ ನಿನ್ನೆ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಕಳೆದ 17 ವರ್ಷಗಳಲ್ಲಿ ಆರು ಬಾರಿ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿದ್ದಾರೆ.

ಬಿಹಾರ(ಜು.28): ನಿತೀಶ್‌ ಕುಮಾರ್‌ ನಿನ್ನೆ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಕಳೆದ 17 ವರ್ಷಗಳಲ್ಲಿ ಆರು ಬಾರಿ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿದ್ದಾರೆ.

ಇನ್ನು ನಿತೀಶ್ ಈ ನಿರ್ಧಾರ ವಿರುದ್ಧ ಉತ್ತರ ಬಿಹಾರದಲ್ಲಿ ತೇಜಸ್ವಿ ಯಾದವ್ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ಕೂಡಾ ಮಾಡಲಾಯ್ತು. ರಾತ್ರಿ ಇಡಿ ಬಿಹಾರದಲ್ಲಿ ಹೈಡ್ರಾಮ ಮಾಡಲಾಯ್ತು. ಅವಕಾಶವಾದಿಯಾಗಿರುವ ನಿತೀಶ್‌ ಅವರಿಗೆ ಮುಖ್ಯಮಂತ್ರಿಯಾಗಿ ಇದು ಕೊನೆಯ ಅವಕಾಶ’ ಎಂದು ಲಾಲು ಹೇಳಿದರು.

ಇನ್ನು ಈ ಎಲ್ಲಾ ರಾಜಕೀಯ ಬೇಳವಣಿಗೆಯ ಮಧ್ಯ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ಮತ್ತೊಂದು ಕಂಟಕ ಎದುರಾಗಿದೆ. ರೈಲ್ವೆ ಹೋಟೆಲ್ ಹಂಚಿಕೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್ ಯಾದವ್ ಮತ್ತವರ ಕಟುಂಬದ ಮೇಲೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.