ಮೋದಿ ಎದುರು ಬಿಂದಾಸ್ ಆಗಿ ಮಾತಾಡೋದು ಇವರು ಮಾತ್ರ!

Nitin Gadkari no fear to talk with PM Modi
Highlights

ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಮೋದಿ  ಎದುರು ಮಾತನಾಡಲು ಸಚಿವರು ಮೇಲೆ ಕೆಳಗೆ ನೋಡುವಾಗ ಗಡ್ಕರಿ ಮಾತ್ರ ಬಿಂದಾಸ್ ಆಗಿ ಮೋದಿಗೆ ನೇರಾನೇರ ಮಾತನಾಡುತ್ತಾರೆ. ಕಳೆದ ವಾರ ಕೂಡ ದಿಲ್ಲಿ-ಮೇರಠ್ ಎಕ್ಸ್‌ಪ್ರೆಸ್ ವೇ ಉದ್ಘಾಟನೆಯಲ್ಲಿ ಮೋದಿ ನಡೆಸಿದ ರೋಡ್ ಶೋನಲ್ಲಿ ಗಡ್ಕರಿ ಮೋದಿ ಪಕ್ಕವೇ ನಿಂತುಕೊಂಡು ಕೈಬೀಸುತ್ತಿದ್ದರು. 

ಬೆಂಗಳೂರು (ಜೂ. 12): ಮೋದಿ ಸರ್ಕಾರದಲ್ಲಿ ವಿಪಕ್ಷಗಳು ಕೂಡ ಇಷ್ಟಪಡುವ ಸಚಿವರೆಂದರೆ ನಿತಿನ್ ಗಡ್ಕರಿ. ತನ್ನ ಬಳಿ ಬಂದವರಿಗೆಲ್ಲ ‘ಯಸ್’ ಅಂದು ಕೇಳಿದ ಕೆಲಸ ಮಾಡಿಕೊಡುವ ಗಡ್ಕರಿ ಎಂದರೆ ಮೋದಿ ಸಾಹೇಬರಿಗೆ ವೈಯಕ್ತಿಕವಾಗಿ ಸ್ವಲ್ಪ ಇರುಸುಮುರಿಸು ಇದೆಯಾದರೂ ಅವರ ಕೆಲಸದ ಬಗ್ಗೆ ಮೆಚ್ಚುಗೆಯಿದೆ.

ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಮೋದಿ ಎದುರು ಮಾತನಾಡಲು ಸಚಿವರು ಮೇಲೆ ಕೆಳಗೆ ನೋಡುವಾಗ ಗಡ್ಕರಿ ಮಾತ್ರ ಬಿಂದಾಸ್ ಆಗಿ ಮೋದಿಗೆ ನೇರಾನೇರ ಮಾತನಾಡುತ್ತಾರೆ. ಕಳೆದ ವಾರ ಕೂಡ ದಿಲ್ಲಿ-ಮೇರಠ್ ಎಕ್ಸ್‌ಪ್ರೆಸ್ ವೇ ಉದ್ಘಾಟನೆಯಲ್ಲಿ  ಮೋದಿ ನಡೆಸಿದ ರೋಡ್ ಶೋನಲ್ಲಿ ಗಡ್ಕರಿ ಮೋದಿ ಪಕ್ಕವೇ ನಿಂತುಕೊಂಡು ಕೈಬೀಸುತ್ತಿದ್ದರು. ಮೋದಿ ಪ್ರಧಾನಿಯಾದ ಮೇಲೆ ತನ್ನ ಸಚಿವರನ್ನು ಅಕ್ಕಪಕ್ಕ ನಿಲ್ಲಿಸಿಕೊಂಡ ಉದಾಹರಣೆ ಇಲ್ಲ.  

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

loader