Asianet Suvarna News Asianet Suvarna News

ಕುಲಾಂತರಿ ತಳಿಗಳ ಪರ ನೀತಿ ಆಯೋಗ ಬ್ಯಾಟಿಂಗ್

2022ರ ವೇಳೆಗೆ ದೇಶದ ರೈತರ ಆದಾಯ ದ್ವಿಗುಣವಾಗಬೇಕಾದರೆ ಬೆಳೆ ವೈವಿಧ್ಯತೆ ಹಾಗೂ ಕುಲಾಂತರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವ ಅಗತ್ಯವಿದೆ ಎಂದು ನೀತಿ ಆಯೋಗ ಅಧ್ಯಕ್ಷ ಅರವಿಂದ್ ಪನಗಾರಿಯಾ ಹೇಳಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸರ್ಕಾರ ಏನೇನು ಮಾಡಬಹುದು ಎಂಬುವುದರ ಬಗ್ಗೆ 3 ವರ್ಷದ ಕಾರ್ಯನೀತಿಯನ್ನು, ನೀತಿ ಆಯೋಗವು ಕಳೆದ ವಾರ ಸಿದ್ಧಪಡಿಸಿದೆ.

NITI Aayogs Panagariya bats for GM crops

ನವದೆಹಲಿ: 2022ರ ವೇಳೆಗೆ ದೇಶದ ರೈತರ ಆದಾಯ ದ್ವಿಗುಣವಾಗಬೇಕಾದರೆ ಬೆಳೆ ವೈವಿಧ್ಯತೆ ಹಾಗೂ ಕುಲಾಂತರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವ ಅಗತ್ಯವಿದೆ ಎಂದು ನೀತಿ ಆಯೋಗ ಅಧ್ಯಕ್ಷ ಅರವಿಂದ್ ಪನಗಾರಿಯಾ ಹೇಳಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸರ್ಕಾರ ಏನೇನು ಮಾಡಬಹುದು ಎಂಬುವುದರ ಬಗ್ಗೆ 3 ವರ್ಷದ ಕಾರ್ಯನೀತಿಯನ್ನು, ನೀತಿ ಆಯೋಗವು ಕಳೆದ ವಾರ ಸಿದ್ಧಪಡಿಸಿದೆ.

ಕುಲಾಂತರಿ ತಳಿಗಳ ಪರ-ವಿರೋಧ ಚರ್ಚೆಯನ್ನು ನಡೆಸಿದ ಬಳಿಕ ನೀತಿ ಆಯೋಗವು ಕುಲಾಂತರಿ ತಳಿಗಳ ಪರವಾಗಿ ನಿರ್ಧಾರ ತೆಗೆದುಕೊಂಡಿದೆಯೆಂದು ಪನಗಾರಿಯಾ ಹೇಳಿದ್ದಾರೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಭಾರತದಲ್ಲಿ ಬಿಟಿ ಹತ್ತಿ ಹೊರತು ಪಡಿಸಿ ಬೇರೆ ಯಾವುದೇ ಕುಲಾಂತರಿ ತಳಿಗಳಿಗೆ ಅವಕಾಶವಿಲ್ಲ. ಕುಲಾಂತರಿ ಸಾಸಿವೆಗಳಿಗೆ ಅನುವು ಮಾಡಿಕೊಡುವ ಪ್ರಕ್ರಿಯೆ ಅಂತಿಮ  ಹಂತದಲ್ಲಿದ್ದು, ಸರ್ಕಾರದ  ಅನುಮತಿಗಾಗಿ ಬಾಕಿಯಿದೆ.

ಜತೆಗೆ, ಬೆಳೆಯಲ್ಲಿ ವೈವಿಧ್ಯತೆ, ಪಶುಸಂಗೋಪನೆ,  ಮೀನುಗಾರಿಕೆ, ಬೆಳೆಗೆ ಉತ್ತಮ ದರಗಳು ಸಿಗುವಂತಾಗಲು ಪರಿಣಾಮಕಾರಿ ಮಾರ್ಕೆಟಿಂಗ್, ಮುಂತಾದವುಗಳ ಬಗ್ಗೆಯೂ ನೀತಿ ಆಯೋಗವು ಹಲವು ಮಹತ್ವದ ಕ್ರಮಗಳನ್ನು ಸೂಚಿಸಿದೆ.

ಕನಿಷ್ಠ ಬೆಂಬಲ ದರ (MSP) ಗಳಿಗೆ ಪರ್ಯಾಯವಾಗಿ ಕೊರತೆ ದರದ ವ್ಯವಸ್ಥೆಯನ್ನು ಪರಿಚಯಿಸುವ ಬಗ್ಗೆಯೂ ನೀತಿ ಆಯೋಗ ಚಿಂತನೆ ನಡೆಸಿದೆ.

Follow Us:
Download App:
  • android
  • ios