ಗಾಜಿಯಾಬಾದ್,ಉ.ಪ್ರ (ಅ.07): 2006 ರ ನಿತಾರಿ ಸರಣಿ ಹತ್ಯೆ ಪ್ರಕರಣದಲ್ಲಿ ನಂದಾದೇವಿ ಹತ್ಯೆ ಮಾಡಿದ ಸುರೇಂದ್ರ ಕೋಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಈ ಮೊದಲು ಸುರೇಂದ್ರ ಕೋಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಅಲಹಾಬಾದ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಕೋಳಿಯವರ ಪ್ರತಿಕ್ರಿಯೆ ಕೇಳಿತ್ತು.

ಸುರೇಂದ್ರ ಇದೊಂದೆ ಪ್ರಕರಣದಲ್ಲಿ ಅಪರಾಧಿಯಲ್ಲ. ರಿಂಪಾ ಹಾಲ್ದೇರ್ ಹತ್ಯೆ, ಲೈಂಗಿಕ ಕಿರುಕುಳ ಮುಂತಾದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು. ಇದನ್ನೆಲ್ಲಾ ಮನಗಂಡ ನ್ಯಾಯಾಲಯ ಸುರೇಂದ್ರನಾಥ್ ಕೋಳಿಗೆ ಮರಣದಂಡನೆ ವಿಧಿಸಿದೆ.