ಆದಿಚುಂಚನಗಿರಿ ಮಠವು ರಾಜಕಾರಣ ಮಾಡುತ್ತಿಲ್ಲವೆಂದೂ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಮಠವು ನಾಡಿಗೆ ಪ್ರಧಾನಿ, ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಕೆಂಗಲ್ ಹನುಮಂತಯ್ಯನವರಂಥ ನಾಯಕರನ್ನು ತಯಾರು ಮಾಡಿದೆ. ಅನಂತಕುಮಾರ್, ಯಡಿಯೂರಪ್ಪನವರಿಗೆ ಮಠ ಆಶೀರ್ವಾದ ಮಾಡಿದೆ. ಇಂಥ ನಾಯಕರ ಮೂಲಕ ಸಮಾಜ ಕಟ್ಟುವ ಕೆಲಸ ಮಾಡುತ್ತದೆ ಹೊರತು ರಾಜಕಾರಣ ಮಾಡಲ್ಲ ಎಂದವರು ಹೇಳಿದ್ದಾರೆ.
ಮಂಡ್ಯ(ಆ. 13): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಕುರಿತು ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಮಠಕ್ಕೆ ಅಮಿತ್ ಶಾ ಏಕಾಏಕಿ ಭೇಟಿ ನೀಡಿಲ್ಲ. ಎರಡು ವರ್ಷಗಳ ಹಿಂದೆ ನಾವು ಭೇಟಿಗೆ ಮನವಿ ಮಾಡಿದ್ದೆವು. ಈ ಹಿನ್ನೆಲೆಯಲ್ಲಿ ಅವರು ಆದಿಚುಂಚನಗಿರಿ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ನಿರ್ಮಲಾನಂದ ಶ್ರೀಗಳು ತಿಳಿಸಿದ್ದಾರೆ.
ಇದೇ ವೇಳೆ, ಆದಿಚುಂಚನಗಿರಿ ಮಠವು ರಾಜಕಾರಣ ಮಾಡುತ್ತಿಲ್ಲವೆಂದೂ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಮಠವು ನಾಡಿಗೆ ಪ್ರಧಾನಿ, ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಕೆಂಗಲ್ ಹನುಮಂತಯ್ಯನವರಂಥ ನಾಯಕರನ್ನು ತಯಾರು ಮಾಡಿದೆ. ಅನಂತಕುಮಾರ್, ಯಡಿಯೂರಪ್ಪನವರಿಗೆ ಮಠ ಆಶೀರ್ವಾದ ಮಾಡಿದೆ. ಇಂಥ ನಾಯಕರ ಮೂಲಕ ಸಮಾಜ ಕಟ್ಟುವ ಕೆಲಸ ಮಾಡುತ್ತದೆ ಹೊರತು ರಾಜಕಾರಣ ಮಾಡಲ್ಲ ಎಂದವರು ಹೇಳಿದ್ದಾರೆ.
