ದೇಶದ ಮೊಟ್ಟ ಮೊದಲ ಪೂರ್ಣ ಪ್ರಮಾಣದ ರಕ್ಷಣಾ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ಪಾತ್ರರಾದ ನಿರ್ಮಲಾ ಸೀತಾರಾಮನ್ ಅಧಿಕಾರ ಸ್ವೀಕರಿಸಿದ ವಾರದೊಳಗೆ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಸದ್ಯದಲ್ಲಿಯೇ ಸೇನೆಯಲ್ಲಿ ಮಹಿಳಾ ತುಕಡಿಯನ್ನು ಪರಿಚಯಿಸುವ ನಿರ್ಧಾರ ಕೈಗೊಂಡಿದ್ದಾರೆ.

ನವದೆಹಲಿ (ಸೆ.08): ದೇಶದ ಮೊಟ್ಟ ಮೊದಲ ಪೂರ್ಣ ಪ್ರಮಾಣದ ರಕ್ಷಣಾ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ಪಾತ್ರರಾದ ನಿರ್ಮಲಾ ಸೀತಾರಾಮನ್ ಅಧಿಕಾರ ಸ್ವೀಕರಿಸಿದ ವಾರದೊಳಗೆ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಸದ್ಯದಲ್ಲಿಯೇ ಸೇನೆಯಲ್ಲಿ ಮಹಿಳಾ ತುಕಡಿಯನ್ನು ಪರಿಚಯಿಸುವ ನಿರ್ಧಾರ ಕೈಗೊಂಡಿದ್ದಾರೆ.

ಸೇನೆಯಲ್ಲಿ ಲಿಂಗ ಬೇಧವನ್ನು ಮುರಿಯಲು ಮಹಿಳಾ ತುಕಡಿಯನ್ನು ರಚಿಸಲಾಗುವುದು. ಇದೊಂದು ಮಹತ್ತರ ಹೆಜ್ಜೆಯಾಗಿದೆ. ಸುಮಾರು 800 ಮಹಿಳೆಯರನ್ನು ಸೇನಾ ಪೊಲೀಸರಾಗಿ ನಿಯುಕ್ತಿ ಮಾಡಲಾಗುವುದು. ಇದು ಲಿಂಗ ನಿರ್ದಿಷ್ಟ ಅಪರಾಧಗಳಲ್ಲಿ ತನಿಖೆಗೆ ಸಹಾಯಕವಾಗಲಿದೆ. ಪ್ರಸ್ತುತ ಸೇನೆಯ ಮೆಡಿಕಲ್, ಕಾನೂನು, ಶೈಕ್ಷಣಿಕ, ಎಂಜಿನೀಯರಿಂಗ್ ವಿಭಾಗಗಳಲ್ಲಿ ಅವಕಾಶ ನೀಡಲಾಗಿದೆ. ಅದರಂತೆ ಪೊಲೀಸ್ ವಿಭಾಗದಲ್ಲಿಯೂ ಅವಕಾಶ ನೀಡಲಾಗುವುದು ಎಂದು ಲೆಫ್ಟಿನೆಂಟ್ ಜನರಲ್ ಕುಮಾರ್ ಹೇಳಿದ್ದಾರೆ.

ಮಿಲಿಟರಿ ಸೇನಾ ಪೊಲೀಸ್ ತುಕಡಿಯಲ್ಲಿ ಮಹಿಳೆಯರಿಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಪ್ರಕ್ರಿಯೆ ಸದ್ಯದಲ್ಲಿ ಪ್ರಾರಂಭವಾಗುವುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕೆಲ ದಿನಗಳ ಹಿಂದೆ ಹೇಳಿದ್ದರು.