13 ಸಾವಿರ ಕೋಟಿ ರು. ವಂಚಿಸಿದ್ದ ನೀರವ್ ಮೋದಿ| ಬ್ರಿಟನ್ನಲ್ಲಿ ಮಾಸಿಕ 18 ಲಕ್ಷ ರು. ವೇತನದ ಕೆಲಸಕ್ಕಿದ್ದ ನೀಮೋ!
ಲಂಡನ್[ಮಾ.21]: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರು. ವಂಚನೆ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ವಜ್ರೋದ್ಯಮಿ ನೀರವ್ ಮೋದಿ ತಾನು, ಬ್ರಿಟನ್‌ನಲ್ಲಿ ಮಾಸಿಕ 20000 ಪೌಂಡ್(18 ಲಕ್ಷ ರು.) ವೇತನಕ್ಕೆ ಕೆಲಸ ಮಾಡುತ್ತಿದ್ದೇನೆ ಎಂದು ಬ್ರಿಟನ್ ಕೋರ್ಟ್ ಬಳಿ ಹೇಳಿಕೊಂಡಿದ್ದಾನೆ.
ಅಲ್ಲದೆ, ಈ ಸಂಬಂಧ ತಾನು ಪಾವತಿ ಮಾಡುತ್ತಿರುವ ತೆರಿಗೆ ಸಾಕ್ಷ್ಯಾಧಾರಕ್ಕಾಗಿ 18 ಲಕ್ಷ ರು.ನ ವೇತನ ರಸೀದಿ ಹಾಗೂ ರಾಷ್ಟ್ರೀಯ ವಿಮೆ ಸಂಖ್ಯೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾನೆ.
ನೀಮೋನ 241ಪೇಂಟಿಂಗ್ಸ್, 11 ವಾಹನ ಹರಾಜು: ಇಡಿ
ವಜ್ರೋದ್ಯಮಿ ನೀರವ್ ಮೋದಿಗೆ ಸೇರಿದ್ದ 241 ವರ್ಣಚಿತ್ರಗಳು (ಪೇಂಟಿಂಗ್ಸ್) ಹಾಗೂ 11 ವಾಹನಗಳನ್ನು ಮಾರಾಟ ಮಾಡಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ. ಈ ಕುರಿತ ಇಡಿ ಸಲ್ಲಿಸಿದ್ದ ಮನವಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ. ಈ ತಿಂಗಳ ಅಂತ್ಯದಲ್ಲಿ ಇವುಗಳ ಹರಾಜು ನಡೆಸುವ ಸಾಧ್ಯತೆ ಇದೆ. ಈ ಪೇಟಿಂಗ್‌ಗಳ ಮೌಲ್ಯ ಸುಮಾರು 57 ಕೋಟಿ ರು. ಎಂದು ಅಂದಾಜಿಸಲಾಗಿದೆ.
