ನಿಫಾಗೆ ಹೆದರಿ ರಜೆ ಕೇಳುತ್ತಿರುವ ವೈದ್ಯರು..!

Nipah scare: Doctors, Nurses asked to go on leave
Highlights

ನಿಫಾ ವೈರಸ್‌ಗೆ ಹೆದರಿ ಆಸ್ಪತ್ರೆ ಸಿಬ್ಬಂದಿಯೇ ರಜೆ ಕೇಳುತ್ತಿರುವ ಘಟನೆ ಕೇರಳದಲ್ಲಿ ನಡೆದಿದೆ. ನಿಫಾ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಭೀತಿಗೊಂಡ ಬಲ್ಸರಿಯ ನಾಲ್ವರು ವೈದ್ಯರು ಮತ್ತು ನರ್ಸ್ಗಳು ರಜೆಗಾಗಿ ಮೊರೆ ಇಡುತ್ತಿದ್ದಾರೆ.

ತಿರುವನಂತಪುರಂ(ಜೂ.1): ನಿಫಾ ವೈರಸ್‌ಗೆ ಹೆದರಿ ಆಸ್ಪತ್ರೆ ಸಿಬ್ಬಂದಿಯೇ ರಜೆ ಕೇಳುತ್ತಿರುವ ಘಟನೆ ಕೇರಳದಲ್ಲಿ ನಡೆದಿದೆ. ನಿಫಾ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಭೀತಿಗೊಂಡ ಬಲ್ಸರಿಯ ನಾಲ್ವರು ವೈದ್ಯರು ಮತ್ತು ನರ್ಸ್‌ಗಳು ರಜೆಗಾಗಿ ಮೊರೆ ಇಡುತ್ತಿದ್ದಾರೆ.

ನಿಫಾ ಸೋಂಕಿನಿಂದಾಗಿ ಕೇರಳದ ಉತ್ತರ ಜಿಲ್ಲೆಗಳಲ್ಲಿ ಈವರೆಗೂ 16 ಮಂದಿ ಮೃತಪಟ್ಟಿದ್ದಾರೆ. ಈ  ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವೈದ್ಯರು, ನರ್ಸ್‌ಗಳು ಸೇರಿದರ್ಸ್ ಆಸ್ಪತ್ರೆಯ ಹಲವು ಸಿಬ್ಬಂದಿ ರಜೆ ಹಾಕಿದ್ದಾರೆ. ಆಸ್ಪತ್ರೆಯ ಕಾರ್ಯ ಚಟುವಟಿಕೆ ಸುಗಮವಾಗಿ ಸಾಗಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಆಸ್ಪತ್ರೆಯಲ್ಲಿನ ರೋಗಿಗಳ ದಟ್ಟಣೆ ತಡೆಯುವ ಉದ್ದೇಶದಿಂದ ಸ್ಥಳೀಯ ನೌಕರರ ವಿನಿಮಯ ಸೇರಿದಂತೆ  ಪ್ರಮುಖ ಸಂಸ್ಥೆಗಳಲ್ಲಿ ವಿಚಾರಣೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ನಿಫಾದಿಂದಾಗಿ ಕೋಝಿಕೋಡು ಜಿಲ್ಲಾ  ನ್ಯಾಯಾಲಯ ಸಂಕೀರ್ಣದ ಸೂಪರಿಂಟೆಂಡೆಂಟ್ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ  ಜಿಲ್ಲಾ ನ್ಯಾಯಾಲಯ ಕಾರ್ಯ ಕಲಾಪವನ್ನು ರದ್ದುಗೊಳಿಸುವಂತೆ ಬಾರ್ ಅಸೋಸಿಯೇಷನ್ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದೆ.

loader