ಗಂಜಾಮ್ ಗ್ರಾಮದಲ್ಲಿರುವ ಪ್ರಸಿದ್ಧ ನಿಮಿಷಾಂಬ ದೇವಾಲಯದಲ್ಲಿ ದೇವರ ಸೀರೆ ಕಳವು ಆಗಿದೆ.  

ಶ್ರೀರಂಗಪಟ್ಟಣ (ನ.22): ಗಂಜಾಮ್ ಗ್ರಾಮದಲ್ಲಿರುವ ಪ್ರಸಿದ್ಧ ನಿಮಿಷಾಂಬ ದೇವಾಲಯದಲ್ಲಿ ದೇವರ ಸೀರೆ ಕಳವು ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇವಾಲಯದ ಅರ್ಚಕ ಮತ್ತು ಭದ್ರತಾ ಸಿಬ್ಬಂದಿಯಿಂದಲೇ ದೇವರ ಸೀರೆ ಕಳವಾಗಿರುವ ಅನುಮಾನ ವ್ಯಕ್ತವಾಗುತ್ತಿದೆ. ಭಕ್ತರು ಹರಕೆ ಹೆಸರಿನಲ್ಲಿ ದೇವಿಗೆ ಕೊಟ್ಟಿದ್ದ ಬೆಲೆಬಾಳುವ ನೂರಾರು ರೇಷ್ಮೆ ಸೀರೆಗಳು ನಾಪತ್ತೆಯಾಗಿವೆ. ಸಿಸಿಟಿವಿಯಲ್ಲಿ ದೇವರ ಸೀರೆ ಕದ್ದ ಖದೀಮರ ಕಳ್ಳಾಟದ ದೃಶ್ಯ ಸೆರೆಯಾಗಿತ್ತು. ಪ್ರಕರಣ ಮುಚ್ಚಿ ಹಾಕಲು ಸಿಸಿಟಿವಿ ದೃಶ್ಯಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಕತ್ತರಿ ಹಾಕಿರುವ ಅನುಮಾನವಿದೆ.