ಒಂದು ವೇಳೆ ವಿಶ್ವಸಂಸ್ಥೆಗೆ ಹ್ಯಾಲೆ (44) ಅಮೆರಿಕ ರಾಯಭಾರಿಯಾಗಿ ನೇಮಕಗೊಂಡರೆ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಸೇರಿದ ಮೊದಲ ಮಹಿಳೆ ಮತ್ತು ಅಲ್ಪಸಂಖ್ಯಾತ ಮಹಿಳೆಯಾಗಲಿದ್ದಾರೆ.

ವಾಷಿಂಗ್ಟನ್(ನ.23): ದಕ್ಷಿಣ ಕ್ಯಾರೋಲಿನಾದ ಗವರ್ನರ್ ಭಾರತೀಯ-ಅಮೆರಿಕ ಪ್ರಜೆ ನಿಕ್ಕಿ ಹ್ಯಾಲೆ ಅವರು ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿ ನೇಮಕಗೊಳ್ಳುವ ನಿರೀಕ್ಷೆ ನಿಚ್ಚಳವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಬಗ್ಗೆ ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಹಸ್ತಾಂತರ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ವಿಶ್ವಸಂಸ್ಥೆಗೆ ಹ್ಯಾಲೆ (44) ಅಮೆರಿಕ ರಾಯಭಾರಿಯಾಗಿ ನೇಮಕಗೊಂಡರೆ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಸೇರಿದ ಮೊದಲ ಮಹಿಳೆ ಮತ್ತು ಅಲ್ಪಸಂಖ್ಯಾತ ಮಹಿಳೆಯಾಗಲಿದ್ದಾರೆ. ಅಲ್ಲದೆ, ಭಾರತೀಯ-ಅಮೆರಿಕದ ಮೊದಲ ಕ್ಯಾಬಿನೆಟ್ ದರ್ಜೆಯ ಅಧಿಕಾರಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ.

ಕಳೆದ ವಾರ ಹ್ಯಾಲೆ ವಿದೇಶಾಂಗ ಸಚಿವೆಯಾಗಲಿದ್ದಾರೆ ಎಂಬ ಬಗ್ಗೆ ವರದಿಯಾಗಿತ್ತು.