ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಅಧಿಕಾರಾವಧಿ ಮುಗಿಯುವ 2020ರ ಬಳಿಕ ಅವರ ಸ್ಥಾನಕ್ಕೆ, ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ, ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಪರಿಗಣನೆಗೆ ಬರುವ ನಿರೀಕ್ಷೆಯಿದೆ.
ನವದೆಹಲಿ (ಜ.07): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಅಧಿಕಾರಾವಧಿ ಮುಗಿಯುವ 2020ರ ಬಳಿಕ ಅವರ ಸ್ಥಾನಕ್ಕೆ, ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ, ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಪರಿಗಣನೆಗೆ ಬರುವ ನಿರೀಕ್ಷೆಯಿದೆ.
ಮೈಕಲ್ ವೋಲ್ಫ್ರ ‘ಫೈಯರ್ ಆ್ಯಂಡ್ ಫ್ಯೂರಿ: ಇನ್ಸೈಡ್ ದ ಟ್ರಂಪ್ ವೈಟ್ ಹೌಸ್’ ಪುಸ್ತಕದ ಅಂಶಗಳ ಪ್ರಕಾರ, ಸೌತ್ ಕರೊಲಿನಾದ ಮಾಜಿ ಗವರ್ನರ್ ಹ್ಯಾಲೆ, ತಾವು ಟ್ರಂಪ್ ಆಡಳಿತಕ್ಕೆ ಸಹಜ ವಾರಿಸುದಾರಳು ಎಂಬ ಭಾವನೆ ಹೊಂದಿದ್ದಾರೆ ಎನ್ನಲಾಗಿದೆ. ಹ್ಯಾಲೆ ಮಹತ್ವಾಕಾಂಕ್ಷಿಯಾಗಿದ್ದಾರೆ. ಅವರು ಟ್ರಂಪ್ಗಿಂತಲೂ ಹೆಚ್ಚು ಜಾಣೆ ಎಂದು ಟ್ರಂಪ್ ಆಪ್ತರೂ ಹೇಳುತ್ತಿದ್ದಾರೆ. ಸೌತ್ ಕರೋಲಿನಾ ಗವರ್ನರ್ ಆಗಿ ಆಯ್ಕೆಯಾದ ಪ್ರಥಮ ಮಹಿಳೆ ಹ್ಯಾಲೆ.
ಟ್ರಂಪ್ ಮಗಳು ಇವಾಂಕಾ ಜೊತೆ ಸ್ನೇಹ ಗಳಿಸಿರುವುದರಿಂದ, ಅವರ ಕುಟುಂಬ ವಲಯದಲ್ಲೂ ಹ್ಯಾಲೆಗೆ ಹೆಚ್ಚಿನ ಆದ್ಯತೆಯಿದೆ. ಹೀಗಾಗಿ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಹ್ಯಾಲೆ ಪ್ರಮುಖ ಪಾತ್ರ ನಿರ್ವಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
