Asianet Suvarna News Asianet Suvarna News

ಲೇಡಿಸ್ ಹಾಸ್ಟೆಲ್'ಗೆ ನೈಟ್ ರೋಮಿಯೋ ಕಾಟ; ಸ್ಪೈಡರ್ ಮ್ಯಾನ್ ರೀತಿ ಕಟ್ಟದ ಹಾರಿದ ಭೂಪ..!

ಸ್ಪೈಡರ್ ಮ್ಯಾನ್ ರೀತಿ 40 ಅಡಿ ಕಟ್ಟಡ ಏರಿದ್ದಾನೆ. ಅಲ್ಲದೇ ಸಿನಿಮಾ ಸ್ಟೈಲ್'ನಲ್ಲಿ ವಾಟರ್ ಪೈಪ್ ಮೂಲಕ ಎರಡನೇ ಮಹಡಿಯೇರಿದ ಯುವಕ, ಚಾಲಾಕಿತನದಿಂದ ಇಳಿದು ಹೋಗಿದ್ದಾನೆ.

Night Romeo Found In Ladies Hostel at Hassan

ಹಾಸನ(ಡಿ.07): ನಗರದ ಪ್ರತಿಷ್ಠಿತ ಪಶು ವೈದ್ಯಕೀಯ ಕಾಲೇಜಿನ ಲೇಡಿಸ್ ಹಾಸ್ಟೆಲ್'ನಲ್ಲಿ ಪೋಲಿ ಹುಡುಗನ ಹುಚ್ಚಾಟ ಮಿತಿಮೀರಿದೆ.

ಆ ಯುವಕ, ಸ್ಪೈಡರ್ ಮ್ಯಾನ್ ರೀತಿ 40 ಅಡಿ ಕಟ್ಟಡ ಏರಿದ್ದಾನೆ. ಅಲ್ಲದೇ ಸಿನಿಮಾ ಸ್ಟೈಲ್'ನಲ್ಲಿ ವಾಟರ್ ಪೈಪ್ ಮೂಲಕ ಎರಡನೇ ಮಹಡಿಯೇರಿದ ಯುವಕ, ಚಾಲಾಕಿತನದಿಂದ ಇಳಿದು ಹೋಗಿದ್ದಾನೆ.

ಈ ನೈಟ್​ ರೋಮಿಯೋನ ಕಾಟದಿಂದ ಹಾಸ್ಟೆಲ್ ವಿದ್ಯಾರ್ಥಿನಿಯರಲ್ಲಿ ಆತಂಕ ಹೆಚ್ಚಾಗಿದ್ದು, ಹಾಸ್ಟೆಲ್'ನಲ್ಲಿ ಆತನ ಓಡಾಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಯಾವುದೇ ವಸ್ತುಗಳು ಕಳವಾಗಿಲ್ಲ. ಆದರೆ ಇದು ಕಾಮುಕನ ಪುಂಡಾಟವೋ..? ಇಲ್ಲಾ ಸೈಕೋನ ಹುಚ್ಚಾಟವೋ..ಎಂಬ ಹಲವು ಪ್ರಶ್ನೆಗಳಿಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ.

Follow Us:
Download App:
  • android
  • ios