ನೈಸ್ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಶಿಫಾರಸ್ಸು ಮಾಡಿದೆ. ಅಲ್ಲದೇ ಸಿಬಿಐ, ಜಾರಿನಿರ್ದೇಶನಾಲಯ ಮೂಲಕ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೈಸ್ ಸದನ ಸಮಿತಿ ಶಿಫಾರಸ್ಸು ಮಾಡಿದೆ.
ಬೆಳಗಾವಿ (ಡಿ.01): ನೈಸ್ ಅಕ್ರಮಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ತಯಾರಿಸಿರುವ ವರದಿಯನ್ನು ವಿಧಾನಸಭೆಯಲ್ಲಿ ಇವತ್ತು ಮಂಡಿಸಲಾಯ್ತು.
ಕಾನೂನು ಸಚಿವ ಟಿ.ಬಿ ಜಯಚಂದ್ರ ನೈಸ್ ಸದನ ಸಮಿತಿ ತಯಾರಿಸಿರುವ ವರದಿಯನ್ನು ಮಂಡಿಸಿದರು.
ನೈಸ್ ವಶದಲ್ಲಿರುವ 11 ಸಾವಿರ ಎಕರೆ ಭೂಮಿ ವಾಪಸ್ ಪಡೆಯಬೇಕು, ವರ್ತುಲ ರಸ್ತೆಗೆ ಅನ್ವಯಿಸುವಂತೆ ಕ್ರಿಯಾ ಒಪ್ಪಂದಕ್ಕೆ ವ್ಯತಿರಿಕ್ತವಾಗಿ ನೀಡಿರುವ 554 ಎಕರೆ ವಿಸ್ತೀರ್ಣದ ಜಮೀನಿನ ಮೌಲ್ಯವನ್ನು ಹಿಂಪಡೆಯಬೇಕು.
ಅದೇ ರೀತಿ ಲಿಂಕ್ ರಸ್ತೆಗೆ ಅನ್ವಯವಾಗುವಂತೆ ಕ್ರಿಯಾ ಒಪ್ಪಂದಕ್ಕೆ ವ್ಯತಿರಿಕ್ತವಾಗಿ 52 ಎಕರೆ ವಿಸ್ತೀರ್ಣದ ಜಮೀನಿನ ಮೌಲ್ಯ ಹಿಂಪಡೆಯಬೇಕು, ಅನಧಿಕೃತ ಗಣಿಗಾರಿಕೆಯಿಂದ ಖಾಸಗಿ ಪಾಲುದಾರರು ಸರ್ಕಾರಕ್ಕೆ ಪಾವತಿಸಿದ ರಾಜಧನ ದಂಡಮೌಲ್ಯ ವಸೂಲಿ ಮಾಡಬೇಕೆಂದು ಸದನ ಸಮಿತಿ ಶಿಫಾರಸ್ಸು ಮಾಡಿದೆ. ಜೊತೆಗೆ ನೈಸ್ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಶಿಫಾರಸ್ಸು ಮಾಡಿದೆ. ಅಲ್ಲದೇ ಸಿಬಿಐ, ಜಾರಿನಿರ್ದೇಶನಾಲಯ ಮೂಲಕ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೈಸ್ ಸದನ ಸಮಿತಿ ಶಿಫಾರಸ್ಸು ಮಾಡಿದೆ.
