ನೈಸ್ ಅಕ್ರಮಗಳ ಕುರಿತು ತನಿಖೆಗೆ ಕಾಗೋಡು ತಿಮ್ಮಪ್ಪ ನವರು ಸ್ಪೀಕರ್ ಆಗಿದ್ದಾಗ ಕಾನೂನು ಸಚಿವ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿ ರಚಿಸಿದ್ದರು. ಆ ಸದನ ಸಮಿತಿ ಈಗಾಗಲೇ ವರದಿಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಿದ್ದು, ವರದಿ ಮಂಡನೆಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಬೆಳಗಾವಿ (ನ.30): ನೈಸ್ ಅಕ್ರಮಗಳ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ಸದನ ಸಮಿತಿ ನೀಡಿರುವ ವರದಿ ಮಂಡಿಸಬೇಕೆಂದು ಒತ್ತಾಯಿಸಿ ಬಿಜೆಪಿಸದಸ್ಯರು ವಿಧಾನಸಭೆಯಲ್ಲಿಂದು ಸದನದ ಬಾವಿಗಿಳಿದು ಧರಣಿ ನಡೆಸಿದರು.
ನೈಸ್ ಅಕ್ರಮಗಳ ಕುರಿತು ತನಿಖೆಗೆ ಕಾಗೋಡು ತಿಮ್ಮಪ್ಪ ನವರು ಸ್ಪೀಕರ್ ಆಗಿದ್ದಾಗ ಕಾನೂನು ಸಚಿವ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿ ರಚಿಸಿದ್ದರು. ಆ ಸದನ ಸಮಿತಿ ಈಗಾಗಲೇ ವರದಿಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಿದ್ದು, ವರದಿ ಮಂಡನೆಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಈ ಒತ್ತಾಯಕ್ಕೆ ದನಿಗೂಡಿಸಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವರದಿ ಮಂಡನೆಗೆ ನಮ್ಮ ತಕರಾರಿಲ್ಲ ಅಂದಿದ್ದಾರೆ. ಮೊದಲು ಸದನ ಸಮಿತಿ ವರದಿ ಮಂಡಿಸಿ ಎಂದು ಧರಣಿ ನಿರತ ಬಿಜೆಪಿಸದಸ್ಯರು ಘೋಷಣೆ ಕೂಗಿದ್ದಾರೆ.
ಈ ವೇಳೆ ಸ್ಪೀಕರ್ 15 ನಿಮಿಷಗಳ ವರೆಗೆ ಸದನದ ಕಲಾಪ ಮುಂದೂಡಿದರು. ಮತ್ತೆ ಕಲಾಪ ಆರಂಭವಾದಾಗ ಮಾತನಾಡಿದ ಸಮಿತಿಯ ಅಧ್ಯಕ್ಷ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ನಾಳೆಯ ಒಳಗಾಗಿ ವರದಿಯ ಪ್ರತಿಗಳ ಮುದ್ರಿಸಿ ಮಂಡಿಸುವ ಭರವಸೆ ನೀಡಿದರು.