ನವದೆಹಲಿ (ನ,21): ವಿವಾದಾತ್ಮಕ ಧಾರ್ಮಿಕ ಪ್ರಚಾರಕ ಝಾಕೀರ್ ನಾಯಕ್ ಅವರ ದ್ವೇಷಪೂರಿತ ಭಾಷಣವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕುವ ಪ್ರಕ್ರಿಯೆಯನ್ನು ರಾಷ್ಟ್ರೀಯ ತನಿಖಾ ತಂಡ ಆರಂಭಿಸಿದೆ.

ಇತ್ತೀಚಿಗೆ ಕೇಂದ್ರ ಸರ್ಕಾರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನನ್ನು ನಿಷೇಧಿಸಿದ ನಂತರ ಇದರ ವೆಬ್ ಸೈಟನ್ನು ಕೂಡಾ ಬ್ಲಾಕ್ ಮಾಡಲಾಗಿದೆ.

"ಇಂಟರ್ ನೆಟ್, ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಹಾಗೂ ಝಾಕಿರ್ ನಾಯಕ್ ರವರ ದ್ವೇಷಪೂರಿತ ಭಾಷಣವನ್ನು ತೆಗೆದು ಹಾಕುವ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.