Asianet Suvarna News Asianet Suvarna News

ಡಾ. ಝಾಕಿರ್ ನಾಯಕ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ವಿವಾದಾತ್ಮಕ ಧಾರ್ಮಿಕ ವಿದ್ವಾಂಸ ಡಾ. ಝಾಕಿರ್ ನಾಯಕ್ ವಿರುದ್ಧ ರಾಷ್ಟ್ರೀಯ ತನಿಖಾ ದಳವು (ಎನ್’ಐಎ) ಇಂದು ಆರೋಪ ಪಟ್ಟಿ ಸಲ್ಲಿಸಿದೆ. ಡಾ. ಝಾಕಿರ್ ನಾಯಕ್ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರಚೋದನೆ, ಹಣಕಾಸು ನೆರವು ಹಾಗೂ ಅಕ್ರಮ ಹಣಕಾಸು ವ್ಯವಹಾರ ಆರೋಪಗಳನ್ನು ಮಾಡಲಾಗಿದೆ.

NIA files chargesheet against Islamic preacher Zakir Naik

ನವದೆಹಲಿ: ವಿವಾದಾತ್ಮಕ ಧಾರ್ಮಿಕ ವಿದ್ವಾಂಸ ಡಾ. ಝಾಕಿರ್ ನಾಯಕ್ ವಿರುದ್ಧ ರಾಷ್ಟ್ರೀಯ ತನಿಖಾ ದಳವು (ಎನ್’ಐಎ) ಇಂದು ಆರೋಪ ಪಟ್ಟಿ ಸಲ್ಲಿಸಿದೆ. ಡಾ. ಝಾಕಿರ್ ನಾಯಕ್ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರಚೋದನೆ, ಹಣಕಾಸು ನೆರವು ಹಾಗೂ ಅಕ್ರಮ ಹಣಕಾಸು ವ್ಯವಹಾರ ಆರೋಪಗಳನ್ನು ಮಾಡಲಾಗಿದೆ.

ಅಕ್ರಮ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಜಾರಿ ನಿರ್ದೇಶನಾಲಯವು (ಈಡಿ) ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ್ದ ವಿಶೇಷ ಪಿಎಂಎಲ್ಏ ನ್ಯಾಯಾಲಯವು ಈಗಾಗಲೇ ಝಾಕಿರ್ ನಾಯಕ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟನ್ನು ಜಾರಿಗೊಳಿಸಿದೆ.

ಝಾಕಿರ್ ನಾಯಕ್ ಸಂಸ್ಥೆಯ ವಿರುದ್ಧ ಹಣದ ಅಕ್ರಮ ವಹಿವಾಟು ತಡೆ ಕಾಯ್ದೆ (ಪಿಎಂಎಲ್ಏ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿರುವ ಈಡಿ, ಸಂಸ್ಥೆಗೆ ಸೇರಿದ 18 ಕೋಟಿ ಮೌಲ್ಯದ ಆಸ್ತಿಯನ್ನು ಈ ಹಿಂದೆ ಮುಟ್ಟುಗೋಲು ಹಾಕಿದೆ.

ವಿವಿಧ ಸಮುದಾಯಗಳ ನಡುವೆ ದ್ವೇಷ ಹುಟ್ಟು ಹಾಕುವ ಆರೋಪದಲ್ಲಿ ಝಾಕಿರ್ ನಾಯಕ್ ಸಂಸ್ಥೆಗೆ 5 ವರ್ಷಗಳ ಅವಧಿಗೆ ಕೇಂದ್ರ ಸರ್ಕಾರವು ನಿಷೇಧ ಹೇರಿದೆ.  

ಕಳೆದ ವರ್ಷ ಜುಲೈ 1ರಂದು ಬಾಂಗ್ಲಾದೇಶದ ಢಾಕದಲ್ಲಿ ನಡೆದ ಬಾಂಬ್ ಸ್ಫೋಟ ಆರೋಪಿಯೊರ್ವ ತಾನು ಝಾಕಿರ್ ನಾಯಕ್’ನಿಂದ  ಪ್ರಭಾವಿತನಾಗಿರುವುದಾಗಿ ಹೇಳಿದ್ದಾನೆಂದು ಅಲ್ಲಿನ ‘ಡೈಲಿ ಸ್ಟಾರ್’ ಪತ್ರಿಕೆ ವರದಿ ಮಾಡಿತ್ತು.

ಝಾಕಿರ್ ನಾಯಕ್ ಮೇಲೆ ಈಗಾಗಲೇ ಕೆನಡಾ ಹಾಗೂ ಇಂಗ್ಲಂಡ್ ನಿಷೇಧ ಹೇರಿವೆ. ಮಲೇಶಿಯಾದಲ್ಲೂ ಝಾಕಿರ್ ನಾಯಕ್’ಗೆ ನಿರ್ಬಂಧವಿದೆ. ಝಾಕಿರ್ ನಾಯ್ಕ್ ಸೌದಿ ಅರೇಬಿಯಾ ಪೌರತ್ವ ಸಿಕ್ಕಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಅದು ಇನ್ನೂ ಖಚಿತವಾಗಿಲ್ಲ.

 

Follow Us:
Download App:
  • android
  • ios