ಆರೋಪಿ ಅಜರ್ 2013ರಲ್ಲಿ ಕೇರಳದಲ್ಲಿ ರಹಸ್ಯ ಉಗ್ರ ತರಬೇತಿ ಶಿಬಿರ ಆಯೋಜಿಸಿದ್ದನೆನ್ನಲಾಗಿದೆ. ಆ ವರ್ಷದ ಏಪ್ರಿಲ್ 23ರಂದು ಥಾನಲ್ ಫೌಂಡೇಶನ್ ಟ್ರಸ್ಟ್ ಸಂಸ್ಥೆ ತನ್ನ ಕಟ್ಟಡವೊಂದರಲ್ಲಿ ರಹಸ್ಯವಾಗಿ ತರಬೇತಿ ಶಿಬಿರ ನಡೆಸಿತ್ತು. ಕತ್ತಿ ಮತ್ತು ಬಾಂಬ್'ಗಳ ಬಳಕೆ ಬಗೆಗಿನ ತರಬೇತಿ ಅದಾಗಿತ್ತು.

ನವದೆಹಲಿ(ಅ. 10): ಭಯೋತ್ಪಾದನೆ ತರಬೇತಿ ಶಿಬಿರ ಆಯೋಜಿಸಿದ ಆರೋಪದ ಮೇಲೆ ಎನ್'ಐಎ ತನಿಖಾ ಸಂಸ್ಥೆಯು ಕೇರಳದ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ. ಕೇರಳದ ಕಣ್ಣೂರಿನ ನರಥ್ ಪಟ್ಟಣದ 24 ವರ್ಷದ ಅಜರುದ್ದೀನ್'ನನ್ನು ಸೋಮವಾರ ರಾತ್ರಿ ಅರೆಸ್ಟ್ ಮಾಡಲಾಗಿದೆ ಎಂದು ಐಎಎನ್'ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇಂದು ಉಗ್ರ ಆರೋಪಿಯನ್ನು ಎರ್ನಾಕುಲಂನ ಟ್ರಯಲ್ ಕೋರ್ಟ್'ಗೆ ಹಾಜರುಪಡಿಸುವ ನಿರೀಕ್ಷೆ ಇದೆ.

ಆರೋಪಿ ಅಜರ್ 2013ರಲ್ಲಿ ಕೇರಳದಲ್ಲಿ ರಹಸ್ಯ ಉಗ್ರ ತರಬೇತಿ ಶಿಬಿರ ಆಯೋಜಿಸಿದ್ದನೆನ್ನಲಾಗಿದೆ. ಆ ವರ್ಷದ ಏಪ್ರಿಲ್ 23ರಂದು ಥಾನಲ್ ಫೌಂಡೇಶನ್ ಟ್ರಸ್ಟ್ ಸಂಸ್ಥೆ ತನ್ನ ಕಟ್ಟಡವೊಂದರಲ್ಲಿ ರಹಸ್ಯವಾಗಿ ತರಬೇತಿ ಶಿಬಿರ ನಡೆಸಿತ್ತು. ಕತ್ತಿ ಮತ್ತು ಬಾಂಬ್'ಗಳ ಬಳಕೆ ಬಗೆಗಿನ ತರಬೇತಿ ಅದಾಗಿತ್ತು.

ಕೇರಳ ಪೊಲೀಸರು ಆಗಲೇ ಪ್ರಕರಣ ದಾಖಲಿಸುತ್ತಾರೆ. ಆ ಬಳಿಕ ತನಿಖೆಯ ಜವಾಬ್ದಾರಿಯನ್ನು ಎನ್'ಐಗೆ ವಹಿಸಲಾಗುತ್ತದೆ. 2016ರ ಜ.20ರಂದು ಎನ್'ಐಎ ವಿಶೇಷ ನ್ಯಾಯಾಯಲವು ಪಿಎಫ್'ಐ ಸಂಘಟನೆಗೆ ಸೇರಿದ 21 ಜನರನ್ನು ಅಪರಾಧಿಗಳೆಂದು ಪರಿಗಣಿಸುತ್ತದೆ.