ಕೇಂದ್ರಕ್ಕೆ ಎನ್‌ಎಚ್‌ಆರ್‌ಸಿ ನೋಟೀಸ್‌

First Published 3, Apr 2018, 10:37 AM IST
NHRC Notice To Union Govt
Highlights

ಪ್ರಶ್ನೆ ಪ್ರತಿಕೆ ಸೋರಿಕೆ ಹಗರಣ ಸಂಬಂಧ ನಾಲ್ಕು ವಾರಗಳಲ್ಲಿ ವಿವರವಾದ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ), ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ(ಎಚ್‌ಆರ್‌ಡಿ)ಕ್ಕೆ ನೋಟೀಸ್‌ ನೀಡಿದೆ.

ನವದೆಹಲಿ : ಪ್ರಶ್ನೆ ಪ್ರತಿಕೆ ಸೋರಿಕೆ ಹಗರಣ ಸಂಬಂಧ ನಾಲ್ಕು ವಾರಗಳಲ್ಲಿ ವಿವರವಾದ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ), ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ(ಎಚ್‌ಆರ್‌ಡಿ)ಕ್ಕೆ ನೋಟೀಸ್‌ ನೀಡಿದೆ.

ವಿದ್ಯಾರ್ಥಿಗಳು ಸಂಪೂರ್ಣ ನಂಬಿಕೆಯನ್ನು ಹೊಂದಿದ ಸಂಸ್ಥೆಗಳ ವಿಶ್ವಾಸಾರ್ಹತೆ ಮೇಲೆ ಇಂತಹ ಘಟನೆಗಳು ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಗಮನಿಸಿದ ಎನ್‌ಎಚ್‌ಆರ್‌ಸಿ , ವಿವರವಾದ ವರದಿಯನ್ನು ಕೋರಿ ಎಚ್‌ಆರ್‌ಡಿ ಕಾರ್ಯದರ್ಶಿ, ಸಿಬಿಎಸ್‌ಇ ಅಧ್ಯಕ್ಷರು ಮತ್ತು ದೆಹಲಿ ಪೊಲೀಸ್‌ ಕಮೀಷನರ್‌ಗಳಿಗೆ ನೋಟಿಸನ್ನು ಕಳುಹಿಸಿದೆ.

loader