ನವದೆಹಲಿ (15): ಹರಿದ್ವಾರ, ಹೃಷಿಕೇಶ ಸೇರಿದಂತೆ ಗಂಗಾ ನದಿ ದಂಡೆಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸಂಪೂರ್ಣ ನಿಷೇಧ ಹೇರಿ ಶುಕ್ರವಾರ ಆದೇಶ ನೀಡಿದೆ.

ಪರಿಸರವಾದಿ ಎಂಸಿ ಮೆಹ್ತಾ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹಸಿರು ನ್ಯಾಯಾಧೀಕರಣದ ಮುಖ್ಯ ನ್ಯಾಯಧೀಶರಾದ ಸ್ವತಂತ್ರಕುಮಾರ್ ನೇತೃತ್ವದ ನ್ಯಾಯಪೀಠ ಉತ್ತರಕಾಶಿವರೆಗೆ ಎಲ್ಲಾ ರೀತಿಯ ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹ, ಮಾರಾಟವನ್ನು ನಿಷೇಧಿಸಿ ಆದೇಶ ನೀಡಿದೆ.

ಅಲ್ಲದೇ ಹಸಿರು ನ್ಯಾಯಾಧೀಕರಣದ ಆದೇಶ ಉಲ್ಲಂಘನೆ ಮಾಡಿದಲ್ಲಿ  5000 ದಂಡವನ್ನು ವಿಧಿಸುವುದಲ್ಲದೇ ಸೂಕ್ತ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು  ಹೇಳಿದೆ.