ಮುಂದೆಯೂ ನಾನೇ ಸಿಎಂ !

Next Term I will be the CM
Highlights

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ ,ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇವೆ. ಚುನಾವಣೆಯಲ್ಲಿ ನಮಗೆ ಅಶೀರ್ವಾದ ಮಾಡಿದ್ರೆ ಮತ್ತಷ್ಟು ಅಭಿವೃದ್ಧಿ ಮಾಡ್ತೀನಿ

ಬೆಂಗಳೂರು(ಮಾ.02): ಮುಖ್ಯಮಂತ್ರಿಯಾಗಲು ನೀವು ಆಶೀರ್ವಾದ ಮಾಡಬೇಕು'. ನಿಮ್ಮ ಆಶೀರ್ವಾದಿಂದ ಐದು ವರ್ಷ ಸಿಎಂ ಆಗಿದ್ದೇನೆ.‘ಮುಂದೆಯೂ ನಿಮ್ಮ ಆಶೀರ್ವಾದ ಬೇಕು ನನಗೆ' ಎಂದು ಮುಂದಿನ ಬಾರಿಯು ನಾನೇ ಸಿಎಂ ಆಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ತಿಳಿಸಿದ್ದಾರೆ.

ಉಪ್ಪಾರ ಸಮುದಾಯದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ಮುಂದೆಯೂ ಕಾಂಗ್ರೆಸ್​ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಅನುದಾನ ನೀಡಲಿದ್ದೇವೆ. ಒಬಿಸಿಯಲ್ಲಿರುವ  ಉಪ್ಪಾರ ಜನಾಂಗ ಎಸ್'ಟಿ'ಗೆ ಸೇರ್ಪಡೆಗೆ ಮನವಿ ಮಾಡುವುದಾಗಿ ಸಿಎಂ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಚುನಾವಣೆ ಬಂತು ಇನ್ಯಾವಾಗ ಎಂದು ಸಮುದಾಯದ ನಾಯಕರೊಬ್ಬರು ಸಿಎಂ ಪ್ರಶ್ನಿಸಿದಾಗ ‘ಏ ಮುಂದೆ ನಾವೇ ಅಧಿಕಾರಕ್ಕೆ  ಬರೋದು, ಮಾಡ್ತಿವಿ ಸುಮ್ನೀರಯ್ಯ..’ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ ,ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇವೆ. ಚುನಾವಣೆಯಲ್ಲಿ ನಮಗೆ ಅಶೀರ್ವಾದ ಮಾಡಿದ್ರೆ ಮತ್ತಷ್ಟು ಅಭಿವೃದ್ಧಿ ಮಾಡ್ತೀನಿ ಎಂದರು ಸಿಎಂ.

loader