Asianet Suvarna News Asianet Suvarna News

‘INDIA’ ಬದಲು! ಬದಲಾಗಲಿದೆ ಭಾರತ! ನೀವು ಓದಲೇಬೇಕಾದ ಸ್ಟೋರಿ

ಮೊಹಮದ್ ಘಜ್ನಿಯಿಂದ ಮೊಹಮದ್ ಘೋರಿವರೆಗೆ ಎಲ್ಲರೂ ಹಿಂದೂಸ್ತಾನದಲ್ಲಿ ಆಳ್ವಕೆ ನಡೆಸಿದರು. ಇದೇ ಟೈಮಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟಿದ್ದು ಬ್ರಿಟೀಷರು.  ಫ್ರೆಂಚರು, ಡಚ್ಚರು ಬ್ರಿಟೀಷರು ವ್ಯಾಪಾರಕ್ಕೆ ಅಂತ ಭಾರತಕ್ಕೆ ಬಂದರು. ಇಂಡಸ್​ ನದಿಯ ಪಕ್ಕದಲ್ಲಿರೋ ನೆಲ ಇದಾಗಿದ್ದರಿಂದ ಇದನ್ನ ಇಂಡಿಯಾ ಅಂತ ಕರೆದರು. ಆವತ್ತಿನಿಂದ ಇವತ್ತಿನವರೆಗೆ.. ಇದು ಇಂಡಿಯಾ ಅಂತಲೆ ಕರೆಸಿಕೊಳ್ತಿದೆ. ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಇಂಡಿಯಾ ಅನ್ನೋ ಹೆಸರಿಗೆ ಮೇಜರ್ ಸರ್ಜರಿ ಮಾಡಲು ಸಜ್ಜಾಗಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

Next change Hindustan

ಮೋದಿ ಮತ್ತೊಂದು ಮಹಾನ್​ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಭವ್ಯ ಭಾರತದ ಭವಿಷ್ಯವನ್ನೇ ಬದಲಾಯಿಸಲು ರೆಡಿಯಾಗಿದ್ದಾರೆ. ಇಂಡಿಯಾದ ಹಣೆ ಬರಹವನ್ನೇ ತಿದ್ದಿ, ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಲು ರೆಡಿಯಾಗಿದ್ದಾರೆ ಭಾರತದ ಪ್ರಧಾನಿ.

ಹಿಂದೆ ಯಾರೂ ಮಾಡಿಲ್ಲ. ಮುಂದೆ ಯಾರೂ ಮಾಡೋದಿಲ್ಲ. ಅಂಥಾ ಮಹೋನ್ನತ ಕಾರ್ಯಕ್ಕೆ ಮುಂದಾಗಿದ್ದಾರೆ ಮೋದಿ. ಜವಹರ್​ಲಾಲ್​ ನೆಹರೂರಿಂದ ಹಿಡಿದು, ಮನಮೋಹನ್​ ಸಿಂಗ್​ವರೆಗೆ. ಭಾರತವನ್ನಾಳಿದ ಯಾವ ಪ್ರಧಾನಿಯೂ ಭಾರತದ ಹಣೆಬರಹವನ್ನ ಬದಲಾಯಿಸಲು ಆಲೋಚನೆ ಮಾಡ್ಲಿಲ್ಲ. ಆದರೆ ರಿಸ್ಕ್ ಆದರೂ ಪರವಾಗಿಲ್ಲ. ನಾನು ದೇಶದ ಹಣೆಬರಹವನ್ನ ಬದಲಿಸ್ತೀನಿ ಅಂತ ದೃಢ ಸಂಕಲ್ಪ ಮಾಡಿದ್ದಾರೆ ಮೋದಿ.

ಮೋದಿ ಪ್ರಧಾನಿಯಾದ ನಂತರ ಸಾಕಷ್ಟು ಬದಲಾವಣೆಗಳನ್ನ ಮಾಡ್ತಿದ್ದಾರೆ. ಎಲ್ಲಾ ಬದಲಾವಣೆಗಳಿಗೂ ಜನರಿಂದ ಶಭಾಷ್​​ ಅಂತ ಅನ್ನಿಸಿಕೊಳ್ತಿದ್ದಾರೆ. ಜನರ ಪ್ರೀತಿ ಮತ್ತು ಅಭಿಮಾನದಿಂದ ಮತ್ತಷ್ಟು ಉತ್ಸುಕತೆ ಪಡೆದ ಮೋದಿ ಇದೀಗ ವಿಶ್ವವೇ ನಿಬ್ಬೆರಗುಗೊಳ್ಳುವಂತೆ ಭಾರತವನ್ನ ಬದಲಿಸಲು ಸಜ್ಜಾಗಿದ್ದಾರೆ. ಮೋದಿಯ ಈ ಮಹಾನ್ ಕಾರ್ಯಕ್ಕೆ ಜೊತೆಯಾಗಿದ್ದಾರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್.

ಯೋಗಿ ಆದಿತ್ಯನಾಥ್.

ಇವರು ಉತ್ತರ ಪ್ರದೇಶದ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರೋ ಯೋಗಿ, ಸಾಕಷ್ಟು ಕಠಿಣ ನಿಲುವುಗಳನ್ನ ತೆಗೆದುಕೊಂಡಿದ್ದಾರೆ. ಮೋದಿನೇ ಗ್ರೇಟ್​ ಅಂತಿದ್ದ ಜನರೆಲ್ಲಾ, ಯೋಗಿಯನ್ನ ನೋಡಿ ಭೇಷ್ ಅಂದಿದ್ದು ಉಂಟು. ಇವರು ಮೋದಿಯನ್ನೂ ಮೀರಿಸ್ತಿದ್ದಾರಲ್ಲಪ್ಪಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ತಿದ್ದಾರೆ.

ಸದ್ಯಕ್ಕೆ ಭಾರತದಲ್ಲಿ ಮೋದಿ ಮತ್ತು ಯೋಗಿ ಹವಾ ಜೋರಾಗಿ ನಡೀತಿದೆ. ಯಾರ ಬಾಯಲ್ಲಿ ಕೇಳಿದರೂ ಇವರಿಬ್ಬರದ್ದೇ ಮಾತುಗಳು ಕೇಳಿ ಬರುತ್ತಿವೆ. ಭಾರತದ ಬದಲಾವಣೆಗೆ ಪಣ ತೊಟ್ಟು ನಿಂತಿರೋ ಈ ನಾಯಕರು ಇದೀಗ ಒಂದು ಹೊಸ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಇಂಡಿಯಾ ಹಣೆಬರಹವನ್ನ ಬದಲಾಯಿಸೋದಕ್ಕೆ ಸಜ್ಜಾಗಿದ್ದಾರೆ. ಇಂಡಿಯಾ ಅನ್ನೋ ಹೆಸರನ್ನೇ ಅಳಿಸಿ, ಹಿಂದೂಸ್ತಾನ ಅಂತ ಮರುನಾಮಕರಣ ಮಾಡೋ ಆಲೋಚನೆ ಮಾಡ್ತಿದ್ದಾರೆ.

ಇಂಡಿಯಾ ಹೆಸರು ಮರುನಾಮಕರಣಕ್ಕೆ ಕೇಂದ್ರದ ತಯಾರಿ​?

ಹೌದು.. ಇಂಡಿಯಾ.. ಜಗತ್ತಿನಾದ್ಯಂತ ಭಾರತವನ್ನು ಗುರುತಿಸೋದೇ ಇಂಡಿಯಾ ಅನ್ನೋ ಹೆಸರಿನಿಂದ.ಆದರೆ ಪ್ರಧಾನಿ ನರೇಂದ್ರ ಮೋದಿ ಈ ಹೆಸರನ್ನೇ ಬದಲಿಸೋ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಈಗಾಗಲೇ ಮೋದಿ ಟೀಮಿನಿಂದ ದೇಶದ ಹೆಸರು ಬದಲಾಯಿಸೋ ಕಾರ್ಯಕ್ಕೆ ಚಿಂತನೆ ನಡೆದಿದ್ದು, ಅದಕ್ಕೆ ಬೇಕಾದ ಕ್ರಮಗಳನ್ನ ಕೈಗೊಳ್ಳುತ್ತಿದ್ದಾರೆ ಅಂತಾನೂ ಹೇಳಲಾಗುತ್ತಿದೆ.

ಭಾರತದಲ್ಲಿ ಹಿಂದೂಗಳೇ ಹೆಚ್ಚಾಗಿದ್ದಾರೆ. ಹಿಂದೂಗಳೇ ಇರೋ ಈ ದೇಶವನ್ನ ಹಿಂದೂಸ್ತಾನ ಅಂತ ಬದಲಾಯಿಸೋ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಅದರಲ್ಲೂ ಇಂಡಿಯಾ ಅನ್ನೋ ಹೆಸರನ್ನ ಹಿಂದೂಸ್ತಾನ ಅಂತ ಬದಲಾಯಿಸಲು ಚಿಂತನೆ ಚನಡೆದಿರೋದು ಯಾಕೆ ಗೊತ್ತಾ? ಇಂಡಿಯಾ ಅನ್ನೋ ಹೆಸರನ್ನ ಇಟ್ಟಿದ್ದು ಆಂಗ್ಲರು. ಬ್ರಿಟೀಷರು ಇಟ್ಟ ಹೆಸರನ್ನ ಬದಲಾಯಿಸಬೇಕು ಅಂತ ಆಲೋಚನೆ ಮಾಡ್ತಿರೋ ಮೋದಿ ಮತ್ತು ತಂಡ, ಇಂಡಿಯಾವನ್ನ ಹಿಂದೂಸ್ತಾನ ಅಂತ ಬದಲಾಯಿಸಲು ಚಿಂತನೆ ನಡೀತಾ ಇದೆ. ಈ ಬಗ್ಗೆ ಪ್ರಮುಖರ ಜೊತೆ ಚರ್ಚೆಯನ್ನೂ ಮಾಡಿದ್ದಾರಂತೆ ಮೋದಿ.

ಬ್ರಿಟೀಷರು ಬರೋ ಮುಂಚೆ ಇದು ‘ಹಿಂದೂಸ್ತಾನ’ವಾಗಿತ್ತು

ಭಾರತವನ್ನ ಹಿಂದೂ ರಾಜರುಗಳು ಆಳ್ತಾ ಇದ್ರು. ಹಿಂದೂಗಳೇ ಇದ್ದ ಈ ನೆಲವನ್ನ ಹಿಂದೂಸ್ತಾನ ಅಂತಲೇ ಎಲ್ಲರೂ ಕರೀತಾ ಇದ್ರು. ಯಾವಾಗ ಮುಸ್ಲಿಂ ದೊರೆಗಳು ಹಿಂದೂಸ್ತಾನದ ಮೇಲೆ ಆಕ್ರಮಣ ಮಾಡಿದ್ರೋ, ಹಿಂದೂಸ್ತಾನ ಅನ್ನೋ ಹೆಸರಿಗೇ ಕೊಡಲಿ ಪೆಟ್ಟು ಬಿದ್ದಿತ್ತು.. ತನ್ನದೇ ಆದ ಸಾಮ್ರಾಜ್ಯಗಳ ಹೆಸರುಗಳಲ್ಲಿ ಹಿಂದೂಸ್ತಾನದಲ್ಲಿ ಆಳ್ವಿಕೆ ನಡೆಸ್ತಿದ್ರು ಪರಕೀಯ ರಾಜರು.

ಮೊಹಮದ್ ಘಜ್ನಿಯಿಂದ ಮೊಹಮದ್ ಘೋರಿವರೆಗೆ ಎಲ್ಲರೂ ಹಿಂದೂಸ್ತಾನದಲ್ಲಿ ಆಳ್ವಕೆ ನಡೆಸಿದರು. ಇದೇ ಟೈಮಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟಿದ್ದು ಬ್ರಿಟೀಷರು.  ಫ್ರೆಂಚರು, ಡಚ್ಚರು ಬ್ರಿಟೀಷರು ವ್ಯಾಪಾರಕ್ಕೆ ಅಂತ ಭಾರತಕ್ಕೆ ಬಂದರು. ಇಂಡಸ್​ ನದಿಯ ಪಕ್ಕದಲ್ಲಿರೋ ನೆಲ ಇದಾಗಿದ್ದರಿಂದ ಇದನ್ನ ಇಂಡಿಯಾ ಅಂತ ಕರೆದರು. ಆವತ್ತಿನಿಂದ ಇವತ್ತಿನವರೆಗೆ.. ಇದು ಇಂಡಿಯಾ ಅಂತಲೆ ಕರೆಸಿಕೊಳ್ತಿದೆ. ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಇಂಡಿಯಾ ಅನ್ನೋ ಹೆಸರಿಗೆ ಮೇಜರ್ ಸರ್ಜರಿ ಮಾಡಲು ಸಜ್ಜಾಗಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಇನ್ನು ಭಾರತ ಉದಯವಾಗಿದ್ದು ಸಿಂಧೂ ನದಿಯ ತಟದಲ್ಲಿ. ಹೀಗಾಗಿ ಇದನ್ನ ‘ಸಿಂಧೂದೇಶ’ ಅಂತಲೂ ಕರೀತಾರೆ. ಪರ್ಶಿ ಯನ್ನರಿಗೆ ಮತ್ತು ಬಹಳಷ್ಟು ವಿದೇಶಿಗರಿಗೆ ಸಿಂಧೂ ಅನ್ನೋದಕ್ಕೆ ಬರ್ತಾ ಇರಲಿಲ್ಲ. ಹೀಗಾಗಿ ಅವರೆಲ್ಲಾ ಸಿಂಧೂ ಅನ್ನೋ ಬದಲು ಹಿಂದೂ ಅಂತಿದ್ರೂ. ಈ ರೀತಿ ವಿಶ್ವದೆಲ್ಲೆಡೆ ಹಿಂದೂ ದೇಶವಾಗಿ ಹಿಂದೂಸ್ತಾನವಾಗಿ ರಾರಾಜಿಸ್ತಿತ್ತು ಭಾರತ. ಭಾರತವನ್ನಾಳಿದ ಭರತ ಮಹಾರಾಜನೂ ಹಿಂದೂ ಆಗಿದ್ದ. ಇಷ್ಟೆಲ್ಲಾ ಹಿನ್ನೆಲೆ ಇರೋ ಭಾರತಕ್ಕೆ ಇಂಡಿಯಾ ಅನ್ನೋ ಹೆಸರು ಸೂಕ್ತವಲ್ಲ ಅಂತ ನಿರ್ಧರಿಸಿದ ಮೋದಿ ಮತ್ತು ಟೀಂ, ಇಂಡಿಯಾ ಅನ್ನೋ ಹೆಸರನ್ನೇ ಬದಲಿಸಲು ಚಿಂತನೆ ನಡೆಸಿದ್ದಾರೆ. ಇಂಡಿಯಾ ಬದಲಿಗೆ ಹಿಂದೂಸ್ತಾನ ಅಂತ ದೇಶಕ್ಕೆ ಮರುನಾಮಕರಣ ಮಾಡಲು ಚಿಂತನೆ ನಡೆಸುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಇಂಡಿಯಾ ಹೆಸರು ಬದಲಾದರೆ ಏನಾಗಬಹುದು ?

ಮೋದಿ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಬದಲಾವಣೆಗಳನ್ನ ತಂದಿದ್ದಾರೆ. ಭ್ರಷ್ಟರ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ನೋಟ್​ ಬ್ಯಾನ್​ ಮಾಡಿ ಎಂಥಾ ಕಠಿಣ ನಿರ್ಧಾರಕ್ಕೂ ನಾನು ಹಿಂಜರಿಯೋದಿಲ್ಲ ಅನ್ನೋದನ್ನ ಸಾರಿ ಹೇಳಿದ್ದಾರೆ. ಮೋದಿಯ ನೋಟ್​ಬ್ಯಾನ್​ನಿಂದ ಸಾಕಷ್ಟು ಕಾಳಧನಿಕರು ತಗಲಾಕೊಂಡಿದ್ದರು.

ನೋಟ್​ ಬ್ಯಾನ್​ ಮಾಡಿದ್ದು ಸರಿಯಲ್ಲ ಅಂತ ವಿರೋಧಿಗಳು ಜರಿದಿದ್ರೂ. ಆದರೂ ಮೋದಿ ನಿರ್ಧಾರವನ್ನ ಪ್ರಶಂಸಿಸಿದ್ರು ಜನ. ಇದರ ನಂತರ ಪಾಪಿ ಪಾಕಿಸ್ತಾನಕ್ಕೆ ಸರಿಯಾಗಿ ತಿರುಗೇಟು ಕೊಟ್ರು. ಸರ್ಜಿಕಲ್ ದಾಳಿ ಮೂಲಕ ಪಾಕಿಸ್ತಾನವನ್ನು ಬಗ್ಗು ಬಡಿದಿತ್ತು ಇಂಡಿಯನ್ ಆರ್ಮಿ.

ಪಾಕ್​ಗೆ ತಿರುಗೇಟು ಕೊಟ್ಟ ಮೋದಿಯ ಕಾರ್ಯವೈಖರಿಯನ್ನೂ ಜನ ಮೆಚ್ಚಿದ್ದರು. ಭ್ರಷ್ಟರ ವಿರುದ್ಧದ ಹೋರಾಟ, ಪಾಕಿಸ್ತಾನದ ವಿರುದ್ಧದ ಹೋರಾಟ.. ಬೇನಾಮಿ ಆಸ್ತಿ ವಿರುದ್ಧದ ಹೋರಾಟ ಎಲ್ಲವೂ ಮೋದಿ ಗಟ್ಟಿ ನಿಲುವನ್ನು ಎತ್ತಿ ತೋರಿಸಿದ್ದವು. ಮೋದಿಗೆ ಬೆಂಬಲ ನೀಡುವಂತೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯನ್ನ ಎತ್ತಿ ಹಿಡಿದರು. ಉತ್ತರ ಪ್ರದೇಶ ಯೋಗಿಯ ವಶವಾಗಿತ್ತು.

ಗೋಹತ್ಯೆ ನಿಷೇಧ

ಯೋಗಿ ಆದಿತ್ಯನಾಥ್​​ ಮತ್ತು ಮೋದಿ ಇಬ್ರೂ ಸೇರ್ಕೊಂಡು ದೇಶಾದ್ಯಂತ ಗೋ ಹತ್ಯೆಗೆ ಕಡಿವಾಣ ಹಾಕಿದ್ರು. ಯಾವ ಪ್ರಧಾನಿನೂ ಮಾಡದ ಗೋ ಹತ್ಯೆ ನಿಶೇಧ ಕಾಯ್ದೆಯನ್ನ ಜಾರಿಗೊಳಿಸಿದ್ರು ಮೋದಿ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಬಹುದು ಅಂತ ಹೇಳಲಾಗ್ತಿತ್ತು. ಆದ್ರೆ ಮೋದಿಯ ಚಾಣಾಕ್ಷ ನಡೆಯನ್ನ ಕಂಡು ಇಡೀ ದೇಶವೇ ಮೆಚ್ಚಿಕೊಂಡಿತ್ತು. ಇಷ್ಟು ಸಿಂಪಲ್ಲಾಗಿ ಗೋ ಹತ್ಯೆ ನಿಷೇಧಿಸಬಹುದಿತ್ತಾ ಅಂತ ಜನ ಶಾಕ್ ಆಗಿದ್ರು.

ಗೋ ಹತ್ಯೆಯ ನಂತರ ಇಂಡಿಯಾ ಅನ್ನೋ ಹೆಸರನ್ನ ಬದಲಾಯಿಸೋ ಆಲೋಚನೆ ನಡೀತಾ ಇದೆ. ಹಿಂದೂಗಳೇ ಹೆಚ್ಚಾಗಿರೋ ಈ ದೇಶವನ್ನ ಹಿಂದೂಸ್ತಾನ ಅಂತ ಕರೆದರೆ ತಪ್ಪೇನು ಅನ್ನೋದು ಬಹುತರೇಕರ ವಾದ. ಇಷ್ಟೇ ಅಲ್ಲ. ಈ ಹಿಂದೆ ಇಂಡಿಯಾ ಹಿಂದೂಸ್ತಾನವೇ ಆಗಿತ್ತು. ಹೀಗಾಗಿ ಹಳೆಯ ಹೆಸರನ್ನೇ ಅಸ್ತಿತ್ವಕ್ಕೆ ತಂದ್ರೆ ತಪ್ಪೇನಿಲ್ಲ ಅನ್ನೋ ಚರ್ಚೆಗಳು ಆರಂಭವಾಗಿವೆ.

ತಮ್ಮ ನಡೆಯಿಂದ ಅಪಾರ ಜನ ಮೆಚ್ಚುಗೆ ಗಳಿಸಿರೋ ಮೋದಿ, ಇಂಡಿಯಾವನ್ನ ಹಿಂದೂಸ್ತಾನ ಅಂತ ಬದಲಾಯಿಸಿದ್ರೂ ಹೆಚ್ಚಿನ ವಿರೋಧ ವ್ಯಕ್ತವಾಗಲ್ಲ ಅಂತ ಹೇಳಲಾಗ್ತಿದೆ. ಇನ್ನೂ ಸಂವಿಧಾನದಲ್ಲೂ ಹೆಸರು ಬದಲಾವಣೆಗೆ ಅವಕಾಶವಿದ್ದು, ಮೂರನೇ ಎರಡು ಭಾಗದಷ್ಟು ಜನಪ್ರತಿನಿಧಿಗಳಿಂದ ಗ್ರೀನ್ ಸಿಗ್ನಲ್ ಸಿಗಬೇಕಿದೆ. ಇದೆಲ್ಲಾ ನಡೆದಿದ್ದೇ ಆದರೆ ಇಂಡಿಯಾ ಹಿಂದೂಸ್ತಾನ ಆಗೋದು ಗ್ಯಾರಂಟಿ..

ವರದಿ: ಶೇಖರ್ ಪೂಜಾರಿ, ಸುವರ್ಣ ನ್ಯೂಸ್