ರೋಶ್ನಿ ಜೇಕಬ್ ಹಲ್ಲೆಗೊಳಗಾದ ವರದಿಗಾರ್ತಿ. ರೋಶ್ನಿ ಹಾಗೂ ಕ್ಯಾಮರಾಮೆನ್ ಪಿ.ಎಸ್. ರೂಪ್ ಅವರು ವೈಟ್'ಫೀಲ್ಡ್'ನಲ್ಲಿ ಸಂಸದ ಶಶಿ ತರೂರು ಭಾಗವಹಿಸಿದ್ದ ಟೆಸ್ಕೋ ಟೆಕ್'ಡೇ IGNITE 2017 ಕಾರ್ಯಕ್ರಮವನ್ನು ವರದಿ ಮಾಡಲು ತೆರಳಿದ್ದರು.
ಬೆಂಗಳೂರು(ಸೆ.28): ಸುವರ್ಣ ನ್ಯೂಸ್'ನ ಸೋದರ ಸಂಸ್ಥೆ ನ್ಯೂಸೇಬಲ್ ವರದಿಗಾರರ ಮೇಲೆ ಕಾಂಗ್ರೆಸ್ ಸಂಸದ ಶಶಿ ತರೂರ್ ಭದ್ರತಾ ಸಿಬ್ಬಂದಿಗೆ ಸ್ವತಃ ಆಜ್ಞಾಪಿಸಿ ಹಲ್ಲೆ ನಡೆಸಿ ಅಮಾನವೀಯತೆ ಮೆರೆದಿದ್ದಾರೆ.
ರೋಶ್ನಿ ಜೇಕಬ್ ಹಲ್ಲೆಗೊಳಗಾದ ವರದಿಗಾರ್ತಿ. ರೋಶ್ನಿ ಹಾಗೂ ಕ್ಯಾಮರಾಮೆನ್ ಪಿ.ಎಸ್. ರೂಪ್ ಅವರು ವೈಟ್'ಫೀಲ್ಡ್'ನಲ್ಲಿ ಸಂಸದ ಶಶಿ ತರೂರು ಭಾಗವಹಿಸಿದ್ದ ಟೆಸ್ಕೋ ಟೆಕ್'ಡೇ IGNITE 2017 ಕಾರ್ಯಕ್ರಮವನ್ನು ವರದಿ ಮಾಡಲು ತೆರಳಿದ್ದರು.ಈ ಸಂದರ್ಭದಲ್ಲಿ ರೋಶ್ನಿ ಅವರು ತರೂರ್ ಅವರನ್ನು ಸಂದರ್ಶಿಸಲು ಯತ್ನಿಸಿದ್ದಾರೆ. ಸಂದರ್ಶನ ನೀಡದ ಸಂಸದರು ಕಾರಿನ ಮುಂಭಾಗದಲ್ಲಿ ಕುಳಿತು ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗೆ ವರದಿಗಾರ್ತಿಯ ಮೇಲೆ ಹಲ್ಲೆ ಮಾಡಲು ಆಜ್ಞಾಪಿಸಿದ್ದಾರೆ.
ಏಳೆಂಟು ಮಂದಿ ಭದ್ರತಾ ಸಿಬ್ಬಂದಿ ರೋಶ್ನಿಯವರ ಮೇಲೆ ಹಲ್ಲೆ ನಡೆಸಿದ್ದು ಘಟನೆಯಲ್ಲಿ ವರದಿಗಾರ್ತಿಗೆ ಕುತ್ತಿಗೆಯ ಭಾಗದಲ್ಲಿ ಮೂಗೇಟುಗಳಾಗಿವೆ ಬಟ್ಟೆಯು ಸಹ ಹರಿದಿದೆ. ಸುಬ್ರತ್ ಎಂಬ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದು, ಈ ಬಗ್ಗೆ ವೈಟ್'ಫೈಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಎಫ್'ಐಆರ್ ದಾಖಲಿಸಿದ್ದಾರೆ.
