ತಾಜಾ ಜಿಲ್ಲಾ, ರಾಜ್ಯ ಹಾಗೂ ದೇಶ-ವಿದೇಶದ ಸುದ್ದಿಗಳು
ಪ್ರೊ. ಯಶ್ ಪಾಲ್ ವಿಧಿವಶ

ಖ್ಯಾತ ವಿಜ್ಞಾನಿ ಹಾಗೂ ಶಿಕ್ಷಣ ತಜ್ಞ ಪ್ರೊ. ಯಶ್ ಪಾಲ್ ಇಂದು ವಿಧಿವಶರಾಗಿದ್ದಾರೆ. 90 ವರ್ಷ ಪ್ರಾಯದ ಪದ್ಮ ವಿಭೂಷಣ ಯಶ್ ಪಾಲ್ ಅವರು ನೊಯ್ಡಾದಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಪ್ರೊ. ಯಶ್ ಪಾಲ್, ವಿಜ್ಞಾನ ಹಾಗೂ ಶಿಕ್ಷಣ ಕ್ಷೇತ್ರದಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. 1986-91ರವರೆಗೆ ಯುಜಿಸಿ ಅಧ್ಯಕ್ಷರಾಗಿದ್ದ ಯಶ್ ಪಾಲ್ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಆನೇಕಲ್:ಮರದ ಗುಂಡಿಗೆ ಬಿದ್ದು ಜಿಬ್ರಾಸಾವು

ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್’ನಲ್ಲಿ ಮರದ ಗುಂಡಿಗೆ ಬಿದ್ದು ಜಿಬ್ರಾ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ವರ್ಷ ವಿದೇಶದಿಂದ ಈ ಜಿಬ್ರಾವನ್ನು ಖರೀದಿಸಲಾಗಿತ್ತು. ರಾತ್ರಿ ಜಿಬ್ರಾ ಓಡಾಡುವಾಗ ಮರ ನೆಡಲು ತೆಗಿಯಲಾಗಿದ್ದ ಗುಂಡಿಗೆ ಹಿಮ್ಮುಖವಾಗಿ ಬಿದ್ದು ಮೇಲೆಳಲು ಸಾದ್ಯವಾಗದೇ ಮೃತಪಟ್ಟಿದೆ. ಈ ಜಿಬ್ರಾ ಗರ್ಭ ಧರಿಸಿತ್ತೆಂದು ಪಾರ್ಕ್ ಮೂಲಗಳಿಂದ ತಿಳಿದು ಬಂದಿದೆ.
