ಕಳೆದ ನಾಲ್ಕು ತಿಂಗಳ ಹಿಂದೆ ಅಷ್ಟೇ ಮುಸ್ಲಿಂ ಹುಡುಗನನ್ನು ಮದುವೆಯಾಗಿದ್ದ ಹಿಂದೂ ಯುವತಿ ನೇಣಿಗೆ ಶರಣಾಗಿದ್ದಾಳೆ. ನವ ವಿವಾಹಿತೆ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಬೆಂಗಳೂರು, [ನ.22]: ಮುಸ್ಲಿಂ ಯುವಕನೊಂದಿಗೆ ಮದುವೆಯಾಗಿದ್ದ ನವ ವಿವಾಹಿತೆಯೊಬ್ಬಳು ನೇಣಿಗೆ ಶರಣಾದ ಘಟನೆ ನಿನ್ನೆ [ಬುಧವಾರ] ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರೋಜ ನೇಣಿಗೆ ಶರಣಾದ ವಿವಾಹಿತೆ. ಈಕೆ ಮೂಲತಃ ಬಾಗೇಪಲ್ಲಿಯವಳು. ತಂದೆ ಇಲ್ಲದ ಮಗಳೆಂದು ಪ್ರೀತಿಯಿಂದ ಸಾಕಿದ ತಾಯಿ, ಕೂಲಿ ಮಾಡಿ ಮಗಳಿಗೆ ವಿದ್ಯಾಭ್ಯಾಸ ಕೊಡಿಸಿದ್ರು. ಅದರಂತೆ ಯುವತಿ ಪಿಯೂಸಿ ಮುಗಿಸಿ ಡಿಗ್ರಿ ಓದುತ್ತಿರುವಾಗ ಬಾಬಾಜಾನ್ ಎಂಬಾತನ ಪರಿಚಯವಾಗಿದ್ದು, ಬಳಿಕ ಅದು ಪ್ರೀತಿಗೆ ತಿರುಗಿತ್ತು. 

ಈ ವಿಷಯ ರೋಜ ಮನೆಯವರಿಗೆ ತಿಳಿದಿದ್ದು, ಯುವಕ ಮುಸ್ಲಿಂ ಆದ ಕಾರಣ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆಯೂ ಕಳೆದ ನಾಲ್ಕು ತಿಂಗಳ ಹಿಂದೆ ಬಾಬಾಜಾನ್ ಎಂಬಾತನ ಜೊತೆ ಮನೆತೊರೆದ ಯುವತಿ ನಗರದ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯ ಬ್ಯಾಟರಾಯನಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು

ಆದರೆ, ಅದೇನಾಗಿತ್ತೋ ಏನೋ ಯುವಕನ ನಂಬಿ ಬಂದ ಯುವತಿ ನಿನ್ನೆ [ಬುಧವಾರ] ಸಾವನ್ನಪ್ಪಿದ್ದಾಳೆ. ಬಾಬಾಜಾನ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು.

ಬಾಬಾ ಜಾನ್ ರೋಜಳನ್ನ ಬಲವಂತವಾಗಿ ಬ್ಲಾಕ್‍ಮೇಲ್ ಮಾಡಿ ಕರೆದುಕೊಂಡು ಬಂದಿದ್ದಾನೆ. ಇದು ಆತ್ಮಹತ್ಯೆ ಅಲ್ಲ. ಆಕೆ ಚೆನ್ನಾಗಿ ಓದುವ ಆಸೆ ಕಂಡಿದ್ದಳು. ಆದ್ರೆ ಅದ್ಯಾವುದಕ್ಕೂ ಆಸ್ಪದ ನೀಡದ ಆತ ಮಗಳಿಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾನೆಂದು ರೋಜ ಪೋಷಕರು ಆರೋಪಿಸಿದ್ದಾರೆ.

ಸದ್ಯ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಬಾಜಾನ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.