ರಾಜ್ಯ ಯುವ ಕಾಂಗ್ರೆಸ್​​​ನಲ್ಲಿ ಭುಗಿಲೆದ್ದ ಭಿನ್ನಮತ | ಯುವ ಕಾಂಗ್ರೆಸ್​ ಅಧ್ಯಕ್ಷರ ಪದಗ್ರಹಣ ದಿನವೇ ಭಿನ್ನಮತ | ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ ಆರೋಪ | ಅಕ್ರಮದ ಬಗ್ಗೆ ನಾಯಕರ ಗಮನಕ್ಕೆ ತಂದರೂ ಪದಗ್ರಹಣ ಕಾರ್ಯಕ್ರಮ

ಬೆಂಗಳೂರು (ಜೂ. 07): ಯುವ ಕಾಂಗ್ರೆಸ್​ ಅಧ್ಯಕ್ಷರ ಪದಗ್ರಹಣ ದಿನವೇ ಭಿನ್ನಮತ ಸ್ಫೋಟಗೊಂಡಿದ್ದು, ಐವರು ಉಪಾಧ್ಯಕ್ಷರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮವಾಗಿದೆ, ಅದರ ಬಗ್ಗೆ ನಾಯಕರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜಿನಾಮೆ ನೀಡಿದ ಉಪಾಧ್ಯಕ್ಷರುಗಳು ಆರೋಪಿಸಿದ್ದಾರೆ.

ನಾಯಕರ ಈ ಕ್ರಮದಿಂದ ಬೇಸತ್ತು ಉಪಾಧ್ಯಕ್ಷರುಗಳಾದ ಕೆಂಪರಾಜು, ರಾಜೇಂದ್ರ ರಾಜಣ್ಣ, ಕೆ ಶಿವಕುಮಾರ್, ಸಮೀಯಾ ತರ್ಬೇಜ್ ಹಾಗೂ ಕಾರ್ಯದರ್ಶಿ ಉಮೇಶ್​​ ಬೋರೇಗೌಡ ಯುವ ಕಾಂಗ್ರೆಸ್​​ಗೆ ರಾಜೀನಾಮೆ ನೀಡಿದ್ದಾರೆ.