Asianet Suvarna News Asianet Suvarna News

ಹೊಸ ಮಹಿಳಾ ಯೋಧರಿಗೆ ಬೆಂಗಳೂರಿನಲ್ಲಿ ತರಬೇತಿ

1700 ಮಹಿಳಾ ಸಿಬ್ಬಂದಿ ನೇಮಕ| ಹೊಸ ಮಹಿಳಾ ಯೋಧರಿಗೆ ಬೆಂಗಳೂರಿನಲ್ಲಿ ತರಬೇತಿ

Newly Appointed Women Soldiers Will Get training In Bangalore
Author
Bangalore, First Published Jul 5, 2019, 7:32 AM IST

ನವದೆಹಲಿ[ಜು.05]: ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆಗೆ ಅಡ್ಡಿಯನ್ನುಂಟು ಮಾಡುವ ಮಹಿಳಾ ಉಗ್ರರ ಹೆಡೆಮುರಿ ಕಟ್ಟಲು ಸೇನೆಗೆ ನೇಮಕವಾಗುವ ಮಹಿಳಾ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿರುವ ಪೊಲೀಸ್ ಮಿಲಿಟರಿ ಪಡೆ (ಸಿಎಂಪಿ)ಯಲ್ಲಿ ತರಬೇತಿ ನೀಡಲು ನಿರ್ಧರಿಸಲಾಗಿದೆ

ಜಮ್ಮು-ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿನ ಉಗ್ರರ ವಿರುದ್ಧದ ಸೇನೆಯ ಕಾರ್ಯಾಚರಣೆಗೆ ಮಹಿಳಾ ಹೋರಾಟ ಗಾರರು ಹಾಗೂ ಮಹಿಳಾ ಉಗ್ರರು ದೊಡ್ಡ ತೊಡಕಾಗಿದ್ದಾರೆ. ಇವರನ್ನು ನಿಗ್ರಹಿಸಲು ಪ್ರತೀ ವರ್ಷ 100 ಮಹಿಳೆಯರಂತೆ 17 ವರ್ಷಗಳಲ್ಲಿ 1700 ಮಹಿಳಾ ಪೊಲೀಸರ ನೇಮಕಕ್ಕೆ ಸೇನೆ ಯೋಜನೆ ರೂಪಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಸೇನಾಧಿಕಾರಿಯೊಬ್ಬರು, ‘ಸೇನೆಯಲ್ಲಿ ಮಹಿಳೆಯರ ಕೊರತೆಯು ಹಿಂಸಾಚಾರಕ್ಕೆ ಸಿಲುಕಿರುವ ಜಮ್ಮು-ಕಾಶ್ಮೀರದಂತೆ ನಗರಗಳಲ್ಲಿ ಗಂಭೀರ ಸಮಸ್ಯೆ ಸೃಷ್ಟಿಸಿದೆ. ಅದೆಲ್ಲಕ್ಕಿಂತಲೂ ಅತ್ಯಾಚಾರ ಸೇರಿದಂತೆ ಇನ್ನಿತರ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ಮಹಿಳಾ ಸಿಬ್ಬಂದಿಯಿಂದ ನೆರವಾಗಲಿದೆ’ ಎಂದು ಪ್ರತಿಪಾದಿಸಿದ್ದಾರೆ.

Follow Us:
Download App:
  • android
  • ios