ಭಾರತಕ್ಕೆ ಎನ್ಎಸ್’ಜಿ ಸದಸ್ಯತ್ವ ನೀಡುವ ವಿಚಾರದಲ್ಲಿ ಇತರ ಸದಸ್ಯ-ದೇಶಗಳೊಂದಿಗೆ ನ್ಯೂಝಿಲ್ಯಾಂಡ್ ಚರ್ಚಿಸಲಿದೆ ದು ಪ್ರಧಾನಿ ಕೀ ಹೇಳಿದ್ದಾರೆ.
ನವದೆಹಲಿ (ಅ.26): ಪರಮಾಣು ಪೂರೈಕೆದಾರರ ಸಮೂಹದ (ಎನ್ಎಸ್’ಜಿ) ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಗಳಿಗೆ ತಮ್ಮ ಬೆಂಬಲವಿದೆ ಎಂದು ಭಾರತದ ಪ್ರವಾಸದಲ್ಲಿರುವ ನ್ಯೂಝಿಲ್ಯಾಂಡ್ ಪ್ರಧಾನಿ ಜಾನ್ ಕೀ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೀ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ ಸಿಗಬೇಕು ಎಂದು ಹೇಳಿದ್ದಾರೆ.
ಭಾರತಕ್ಕೆ ಎನ್ಎಸ್’ಜಿ ಸದಸ್ಯತ್ವ ನೀಡುವ ವಿಚಾರದಲ್ಲಿ ಇತರ ಸದಸ್ಯ-ದೇಶಗಳೊಂದಿಗೆ ನ್ಯೂಝಿಲ್ಯಾಂಡ್ ಚರ್ಚಿಸಲಿದೆ ಎಂದು ಪ್ರಧಾನಿ ಕೀ ಹೇಳಿದ್ದಾರೆ.
ಭಾರತದಲ್ಲಿ ಬದಲಾವಣೆಯಾಗಿದೆ ಹಾಗೂ ದೇಶ ಅಭಿವೃದ್ಧಿ ಹೊಂದಿದೆ. ನ್ಯೂಝಿಲ್ಯಾಂಡ್ ಭಾರತದೊಂದಿಗೆ ಉತ್ತಮ ಬಾಂಧ್ಯವವನ್ನು ಮುಂದುವರೆಸಲಿದೆ ಎಂದು ಕೀ ಈ ಸಂದರ್ಭದಲ್ಲಿ ಹೇಳಿದ್ದಾರೆ.
