ಗರ್ಭಿಣಿಯರು ಸೈಕಲ್ ತುಳಿಯಬಾರದು ಎನ್ನುವ ನಂಬಿಕೆ ಇದೆ. ಆದರೆ ಸಚಿವೆಯೊಬ್ಬರು ಸೈಕಲ್ ತುಳಿದೇ ಹೆರಿಗೆಗೆಂದು ಆಸ್ಪತ್ರೆಗೆ ತೆರಳಿದ ಘಟನೆಯೊಂದು ನ್ಯೂಜಿಲ್ಯಾಂಡ್ ನಲ್ಲಿ ನಡೆದಿದೆ. 

ವೆಲ್ಲಿಂಗ್ಟನ್‌: ತುಂಬು ಗರ್ಭಿಣಿಯರು ಸೈಕಲ್‌ ಹೊಡೆಯಬಾರದು ಎನ್ನಲಾಗುತ್ತದೆ. ಆದರೆ ನ್ಯೂಜಿಲೆಂಡ್‌ ಸಚಿವೆಯೊಬ್ಬರು, ಸೈಕಲ್‌ ತುಳಿದುಕೊಂಡು ಆಸ್ಪತ್ರೆಗೆ ಬಂದು ಹೆರಿಗೆ ಮಾಡಿಸಿಕೊಳ್ಳಲು ಅಣಿಯಾಗಿದ್ದಾರೆ.

ತಮ್ಮ ನಿವಾಸದಿಂದ ಸುಮಾರು 1 ಕಿ.ಮೀ ದೂರದ ಆಕ್ಲೆಂಡ್‌ ನಗರದ ಆಸ್ಪತ್ರೆಗೆ ಸಚಿವೆ ಜೂಲಿ ಅನ್ನೆ ಜೆಂಟರ್‌ ಅವರು ಸೈಕಲ್‌ ತುಳಿದುಕೊಂಡೇ ಹೋಗಿ ದಾಖಲಾಗಿದ್ದಾರೆ.

ಈ ಕುರಿತು ಮಾತನಾಡಿದ ಸಚಿವೆ ಹಾಗೂ ಸೈಕ್ಲಿಸ್ಟ್‌ ಆಗಿರುವ ಜೂಲಿ ಅನ್ನೆ ಜೆಂಟರ್‌, ‘ಕಾರಿನಲ್ಲಿ ನನ್ನ ಪತಿ, ನನಗೆ ಹಾಗೂ ಸಿಬ್ಬಂದಿಗಳಿಗೆ ಸಾಕಾಗುವಷ್ಟುಸ್ಥಳವಕಾಶ ಇರಲಿಲ್ಲ. ಹಾಗಾಗಿ, ನಾನು ಮತ್ತು ನನ್ನ ಪತಿ ಪ್ರತ್ಯೇಕ ಸೈಕಲ್‌ನಲ್ಲೇ ಆಸ್ಪತ್ರೆಗೆ ಬಂದೆವು,’ ಎಂದು ಹೇಳಿದ್ದಾರೆ.

ಜೆಂಟರ್‌ ಅವರಿಗೆ ಸೋಮವಾರ ಮಧ್ಯಾಹ್ನದವರೆಗೂ ಹೆರಿಗೆ ಆಗಿಲ್ಲ ಎಂದು ಗ್ರೀನ್‌ ಪಕ್ಷದ ವಕ್ತಾರ ಹೇಳಿದ್ದಾರೆ.