ಈಗ ಪೇದೆ ಪುರೋಷತ್ತಮ್ ಮನೆಯಲ್ಲಿಯೇ 1996ರಲ್ಲಿ ಕಳ್ಳತನವಾಗಿದ್ದ ಡಿಪಾರ್ಟ್’ಮೆಂಟ್ ಗನ್ ಸಿಕ್ಕಿದೆ. ಇದೀಗ ಗನ್ ವಶಪಡಿಸಿಕೊಂಡಿರುವ ಪೊಲೀಸರು, ಪೇದೆ ಪುರುಷೋತ್ತಮ್’ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ಬೆಂಗಳೂರು (ಫೆ. 22): ಕಾಟನ್’ಪೇಟೆ ಪೇದೆಗೆ ಥಳಿಸಿ ಗನ್ ಕದ್ದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆಗಾಗಿ ಪೇದೆ ಪುರುಷೋತ್ತಮ್ ಮನೆಯಲ್ಲಿ ಸರ್ಚ್ ಮಾಡ್ತಿದ್ದಾಗ ಪೊಲೀಸರಿಗೆ ಶಾಕ್ ಆಗಿದೆ.

ಈಗ ಪೇದೆ ಪುರೋಷತ್ತಮ್ ಮನೆಯಲ್ಲಿಯೇ 1996ರಲ್ಲಿ ಕಳ್ಳತನವಾಗಿದ್ದ ಡಿಪಾರ್ಟ್’ಮೆಂಟ್ ಗನ್ ಸಿಕ್ಕಿದೆ. ಇದೀಗ ಗನ್ ವಶಪಡಿಸಿಕೊಂಡಿರುವ ಪೊಲೀಸರು, ಪೇದೆ ಪುರುಷೋತ್ತಮ್’ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ಫೆ.17ರಂದು ಪರಿಷತ್ ಸದಸ್ಯ ಮನೋಹರ್ ಗನ್’ಮ್ಯಾನ್ ಆಗಿರುವ ಪುರುಷೋತ್ತಮ್ ಮೇಲೆ ಹಲ್ಲೆ ನಡೆಸಿ ಮೂವರು ಯುವಕರು ಅವರ ಬಳಿಯಿದ್ದ ಗನ್ ಕದ್ದೊಯ್ದಿದ್ದರು.

ವಿನಾಯಕ ಥಿಯೇಟರ್ ಬಳಿ ಇರುವ ಗಣೇಶನ ದೇವಸ್ಥಾನ ಬಳಿ ಈ ಘಟನೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.