ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿ ರಾಘವೇಂದ್ರ ಸಹೋದರ ಮಂಜುನಾಥ್​ ಅವರು ಎಸ್ಪಿ ದಿವ್ಯಾ ಗೋಪಿನಾಥ್`ಗೆ ದೂರು ನೀಡಿದ್ಧಾರೆ.

ಕೋಲಾರ(ಅ.18): ಮಾಲೂರು ಪೊಲೀಸ್ ಠಾಣೆಯಲ್ಲಿ ಸಿಪಿಐ ರಾಘವೇಂದ್ರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ದಿವ್ಯಾ ಗೋಪಿನಾಥ್, ರಾಘವೇಂದ್ರ ರಾತ್ರಿ ಒಕ್ಕಲೇರಿ ಗ್ರಾಮಕ್ಕೆ ಗಸ್ತು ಹೋಗಿದ್ದರು. ಮಧ್ಯರಾತ್ರಿ 2 ಗಂಟೆಗೆ ವಾಪಸ್ ಠಾಣೆಗೆ ಬಂದು ಸರ್ವಿಸ್​​​ ರಿವಾಲ್ವಾರ್​​​​​​ನಿಂದ ಹಣೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್​​ನೋಟ್​​ ಸಿಕ್ಕಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ, ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆಯುತ್ತಿದೆ. ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿ ರಾಘವೇಂದ್ರ ಸಹೋದರ ಮಂಜುನಾಥ್​ ಅವರು ಎಸ್ಪಿ ದಿವ್ಯಾ ಗೋಪಿನಾಥ್`ಗೆ ದೂರು ನೀಡಿದ್ಧಾರೆ.