ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು 6 ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ಮೂವರು ಪ್ರಮುಖ ಆರೋಪಿಗಳು ಜನವರಿ 17ರಂದು ಎನ್.ಆರ್.ಪುರ ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿದ್ದಾರೆ.
ಚಿಕ್ಕಮಗಳೂರು (ಜ.21): ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದ ಹನಿಟ್ರ್ಯಾಪ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳು ಸ್ಟೇಷನ್'ನಿಂದಲೇ ಎಸ್ಕೇಪ್ ಆಗಿದ್ದಾರೆ. ಇದರಲ್ಲಿ ಮಗಳು ರುಕ್ಸನಾಳನ್ನೇ ಬಳಸಿಕೊಂಡು ಹನಿಟ್ರ್ಯಾಪ್ ಕೃತ್ಯಕ್ಕೆ ತಾಯಿ ಕೈರಯನ್ನಿಸ್ಸಾ ಮುಂದಾಗಿದ್ದಳು ಎಂಬ ಮಾಹಿತಿ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು 6 ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ಮೂವರು ಪ್ರಮುಖ ಆರೋಪಿಗಳು ಜನವರಿ 17ರಂದು ಎನ್.ಆರ್.ಪುರ ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿದ್ದಾರೆ.
FIR ದಾಖಲಿಸುವ ಮುನ್ನವೇ ಪರಾರಿಯಾದ ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಿ ಕರೆತರಲು ಎಸ್.ಪಿ ಅಣ್ಣಾಮಲೈ ಸೂಚನೆ ನೀಡಿದ್ದಾರೆ.
ಜನವರಿ 17ರಂದು ಈ ಆರೋಪಿಗಳು ಪರಾರಿಯಾದರೂ ಎನ್.ಆರ್.ಪುರ ಠಾಣೆ ಪೊಲೀಸರು ಮಾಹಿತಿಯೇ ಕೊಟ್ಟಿಲ್ಲ. ಹೀಗಾಗಿ ಆರೋಪಿಗಳ ಪರಾರಿಗೆ ಪೊಲೀಸರೇ ಸಹಕರಿಸಿರುವ ಅನುಮಾನ ವ್ಯಕ್ತವಾಗಿತ್ತು.
ಕೊನೆಗೂ ಹನಿಟ್ರ್ಯಾಪ್ ತಂಡದ ತಂತ್ರಗಾರಿಕೆ ಬಯಲು ಮಾಡಿದ ಎಸ್.ಪಿ ಅಣ್ಣಾಮಲೈ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.