ಶೃತಿ ಮೊಬೈಲ್ ವಾಟ್ಸಾಪ್`ಗೆ ಚಿನ್ನ..ಏನ್ ಮಾಡ್ತಾ ಇದ್ದೀಯ..? ಎಂದು ಅಮಿತ್ ಮೆಸೇಜ್ ಮಾಡಿದ್ದ. ವಾಟ್ಸಪ್ ಮೆಸೇಜ್​`ನಿಂದ ಪತ್ನಿಯ ಮೇಲೆ ರಾಜೇಶ್​ಗೆ ಅನುಮಾನ ಶುರುವಾಗಿತ್ತು. ನಂಬರ್ ಚೆಕ್ ಮಾಡಿಕೊಳ್ಳಲು ಕಾಯಿನ್ ಬೂತ್`​ನಿಂದ ಅಮಿತ್ ನಂ.ಗೆ ರಾಜೇಶ್ ಕಾಲ್ ಮಾಡಿಸಿದ್ದ. ಇದಾದ ಮೇಲೆ ಪತ್ನಿಯ ಮೇಲೆ ಇನ್ನಷ್ಟು ಅನುಮಾನ ಹೆಚ್ಚಿತ್ತು.

ಬೆಂಗಳೂರು(ಜ.15): ವಕೀಲ ಅಮಿತ್ ಶೂಟೌಟ್ ಪ್ರಕರಣ ದಿನಕ್ಕೊಮದು ತಿರುವು ಪಡೆಯುತ್ತಿದೆ. ಸೋಲದೇವನಹಳ್ಳಿ ಬಳಿ ಅಮಿತ್ ಮೇಲೆ ಗುಂಡು ಹಾರಿಸಲಾಗುತ್ತೆ. ಜೊತೆಯಲ್ಲಿದ್ದ ಶೃತಿ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಅಮಿತ್ ಗೌಡ ಸಾವನ್ನಪ್ಪುತ್ತಾರೆ. ಅಂದಹಾಗೆ ಅಮಿತ್`ಗೆ ಗುಂಡಿಕ್ಕಿದವರ್ಯಾರು..? ಎಂಬ ಪ್ರಶ್ನೆಗೆ ತನಿಖೆ ನಡೆದಂತೆ ಉತ್ತರ ಸಿಕ್ಕಿದೆ.

ಶೃತಿ ಗೌಡ ಮಾವ ಗೋಪಾಲ ಕೃಷ್ಣ ಬಲಗೈಯ್ಯಲ್ಲಿ ಗನ್​ ಪೌಡರ್ ಗುರುತಿತ್ತು. ಹೀಗಾಗಿ, ಪೊಲೀಸರು ಗೋಪಾಲಕೃಷ್ಣರನ್ನು ವಶಕ್ಕೆ ತೆಗೆದುಕೊಂಡರು. ಆದರೆ ಗುಂಡು ಹಾರಿಸಿದ್ದವನು ಗೋಪಾಲಕೃಷ್ಣ ಅಲ್ಲ, ಪತಿ ರಾಜೇಶ್. ಮಗ ಮತ್ತು ಆತನ ಮೊಮ್ಮಕ್ಕಳಿಗಾಗಿ ಕೊಲೆ ಆರೋಪ ಹೊತ್ತುಕೊಳ್ಳಲು ಗೋಪಾಲಕೃಷ್ಣ ಮುಂದಾಗಿದ್ದರು. ಅಸಲಿಗೆ ಗೋಪಾಲಕೃಷ್ಣಗೆ ರಿವಾಲ್ವರ್ ಟ್ರಿಗರ್ ಎಳೆಯುವುದೇ ಗೊತ್ತಿರಲಿಲ್ಲ. ಪ್ರತ್ಯೇಕ ವಿಚಾರಣೆ ವೇಳೆ ಖಾಲಿ ರಿವಾಲ್ವರ್ಅ ನ್ನು ಗೋಪಾಲಕೃಷ್ಣಗೆ ಕೊಟ್ಟಾಗ ರಿವಾಲ್ವರ್ ಹ್ಯಾಂಡಲ್ ಮಾಡುವುದು ಹೇಗೆಂದೇ ಗೋಪಾಲಕೃಷ್ಣಗೆ ಗೊತ್ತಿರಲಿಲ್ಲ.

ಶೃತಿ ಗೌಡ ಲಾಸ್ಟ್ ಮೆಸೇಜ್: ಅಮಿತ್ ಮೃತಪಡುತ್ತಲೇ ಶೃತಿ ಸಹ ಲಾಡ್ಜ್`ನಲ್ಲಿ ನೇಣು ಬಿಗಿದುಕೊಮಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಶೃತಿ `ಯಾವುದೇ ತಪ್ಪು ಮಾಡದ ಅಮಿತ್ ಅವರನ್ನು ನನ್ನ ಪತಿ ಕೊಂದಿದ್ದಾರೆ. ಅವರು ಸಹ ಪ್ರಭಾವಿಗಳು. ನಮ್ಮ ಕುಟುಂಬವನ್ನು ಸುಮ್ಮನೆ ಬಿಡುವುದಿಲ್ಲ. ನನ್ನಿಂದ ಒಂದು ಜೀವ ಹೋಯಿತು ಎನ್ನುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ತಂಗಿ ಕೀರ್ತಿ ಗೌಡಗೆ ಶೃತಿ ಮೆಸೇಜ್ ಮಾಡಿದ್ದರು.

ಅಮಿತ್ ಕುಟುಂಬದವರ ವಾದ
ಶೃತಿ ಮತ್ತು ಅಮಿತ್ ನಡುವೆ ಅಕ್ರಮ ಸಂಬಂಧ ಇರಲಿಲ್ಲ. ಪಿಡಿಓ ಆಗಿದ್ದ ಶೃತಿ, ಭೂವ್ಯಾಜ್ಯಗಳ ವಿಚಾರಗಳ ಕುರಿತು ವಕೀಲ ಅಮಿತ್ ಜೊತೆ ಚರ್ಚಿಸುತ್ತಿದ್ದರು. ವೃತ್ತಿಯ ಕಾರಣಕ್ಕಾಗಿ ಇಬ್ಬರೂ ಹೊರಗೆ ಭೇಟಿಯಾಗುತ್ತಿದ್ದರು. ಶುಕ್ರವಾರ ಕೂಡಾ ಶೃತಿಯೇ ಅಮಿತ್​ಗೆ ಕರೆ ಮಾಡಿದ್ದರು. ಆಚಾರ್ಯ ಕಾಲೇಜು ಬಳಿ ಬರಲು ತಿಳಿಸಿದ್ದರು. ಶೃತಿ ಮತ್ತು ಅಮಿತ್ ಇದ್ದ ಕಾರ್​ನಲ್ಲಿ ಭೂವ್ಯಾಜ್ಯದ ಕುರಿತ ದಾಖಲೆಗಳೂ ಇದ್ದದ್ದು ಈ ವಾದಕ್ಕೆ ಪುಷ್ಠಿ ನೀಡುತ್ತಿದೆ.

ಶೃತಿ ಮತ್ತು ಅಮಿತ್ 8 ತಿಂಗಳ ಪರಿಚಯ: ಕುಟುಂಬದ ಸಮಾರಂಭವೊಂದರಲ್ಲಿ ಶೃತಿ ಮತ್ತು ಅಮಿತ್ ಇಬ್ಬರ ಪರಿಚಯವಾಗಿತ್ತು. ಶೃತಿಗೆ ಬೈಕ್​ ರೈಡಿಂಗ್ ಬಗ್ಗೆ ಬಹಳ ಕ್ರೇಜ್ ಇತ್ತು, ಅಮಿತ್ ಜೊತೆ ಬೈಕ್ ರೈಡಿಂಗ್ ಕುರಿತಂತೆ ಶೃತಿ ಹರಟುತ್ತಿದ್ದರು. ಫೇಸ್​ ಬುಕ್`​ನಲ್ಲಿ ಕೂಡಾ ಬೈಕ್ ರೈಡಿಂಗ್ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅಮಿತ್ ಫೇಸ್​ ಬುಕ್​ನಲ್ಲಿ ತನ್ನ ಬೈಕ್ ರೈಡಿಂಗ್ ಫೋಟೋಗಳನ್ನು ಅಪ್​ಲೋಡ್ ಮಾಡುತ್ತಿದ್ದ. ಪತಿ ರಾಜೇಶ್, ಶೃತಿಗಾಗಿ ಡುಕಾಟಿ ಬೈಕ್ ಕೊಡಿಸಿದ್ದ. ಆದರೆ, ರಾಜೇಶ್ ಪತ್ನಿ ಶೃತಿಯನ್ನು ಪದೇ ಪದೇ ಅನುಮಾನಿಸುತ್ತಿದ್ದ
ಈ ಕುರಿತು ರಾಜೇಶ್ & ಶೃತಿ ಮಧ್ಯೆ ಹಲವು ಬಾರಿ ಜಗಳವಾಗಿತ್ತು. ಶೃತಿ ಮತ್ತು ರಾಜೇಶ್​ರನ್ನು ಹೋಟೆಲ್​ನಲ್ಲಿ ಒಟ್ಟಿಗೇ ಕುಳಿತಿದ್ದುದನ್ನು ನೋಡಿದ್ದೆ ಎಂದು ರಾಜೇಶ್​ಗೆ ಸಂಬಂಧಿಯೊಬ್ಬ ಹೇಳಿದ್ದ. ಇದರಿಂದ ಶೃತಿಯ ಮೇಲೆ ಅನುಮಾನ ಪಡುತ್ತಲೇ ಹೋದ ರಾಜೇಶ್

ಫಾಲೋ ಮಾಡುತ್ತಿದ್ದ ಪತಿ: ಪತ್ನಿ ಶೃತಿಯ ಮೇಲೆ ಅನುಮಾನ ಪಟ್ಟಿದ್ದ ರಾಜೇಶ್ ಎರಡು ಮಾಡು ಫಾಲೋ ಮಾಡಿದ್ದ. ಒಮ್ಮೆ ಮತ್ತು ಒಮ್ಮೆ ಕಾರಿನಲ್ಲಿ ಎರಡೂ ಬಾರಿ ಪತಿ ತನ್ನನ್ನು ಫಾಲೋ ಮಾಡುತ್ತಿರುವುದನ್ನು ಶೃತಿ ಗೌಡ ಗುರುತಿಸಿದ್ದರು. ಈ ಬಗ್ಗೆ ಗಂಡ-ಹೆಂಡತಿ ಮಧ್ಯೆ ದೊಡ್ಡ ಜಗಳವೇ ಆಗಿತ್ತು. ಅಮಿತ್ ಮತ್ತು ಶೃತಿ ಸಂಬಂಧದ ಬಗ್ಗೆ ಶೃತಿ ಹೆತ್ತವರಿಗೆ ರಾಜೇಶ್ ದೂರಿದ್ದ. ಹೆತ್ತವರ ಎದುರು ಇನ್ನೆಂದೂ ಅಮಿತ್`​ನನ್ನು ಭೇಟಿಯಾಗಲ್ಲ ಎಂದು ಶೃತಿ ಆಣೆ ಮಾಡಿದ್ದರು.. ಇದಾದ ನಂತರ ಫೇಸ್ ​ಬುಕ್`​ನಲ್ಲಿ ತಿಯ ಫ್ರೆಂಡ್​ ಲಿಸ್ಟ್`​ನಲ್ಲಿ ಅಮಿತ್​ ಹೆಸರನ್ನ ರಾಜೇಶ್ ಡಿಲೀಟ್ ಮಾಡಿಸಿದ್ದ.

ವಾಟ್ಸಾಪ್ ಮೆಸೇಜ್`​ನಿಂದ ಶುರುವಾಗಿತ್ತು ಅನುಮಾನ: ಶೃತಿ ಮೊಬೈಲ್ ವಾಟ್ಸಾಪ್`ಗೆ ಚಿನ್ನ..ಏನ್ ಮಾಡ್ತಾ ಇದ್ದೀಯ..? ಎಂದು ಅಮಿತ್ ಮೆಸೇಜ್ ಮಾಡಿದ್ದ. ವಾಟ್ಸಪ್ ಮೆಸೇಜ್​`ನಿಂದ ಪತ್ನಿಯ ಮೇಲೆ ರಾಜೇಶ್​ಗೆ ಅನುಮಾನ ಶುರುವಾಗಿತ್ತು. ನಂಬರ್ ಚೆಕ್ ಮಾಡಿಕೊಳ್ಳಲು ಕಾಯಿನ್ ಬೂತ್`​ನಿಂದ ಅಮಿತ್ ನಂ.ಗೆ ರಾಜೇಶ್ ಕಾಲ್ ಮಾಡಿಸಿದ್ದ. ಇದಾದ ಮೇಲೆ ಪತ್ನಿಯ ಮೇಲೆ ಇನ್ನಷ್ಟು ಅನುಮಾನ ಹೆಚ್ಚಿತ್ತು.