ಹಾಸನದ ಹೊಳೆನರಸೀಪುರದಲ್ಲಿ ಇಂದು ನಡೆಯಬೇಕಿದ್ದ ಬೆಂಗಳೂರು ಮೂಲದ ಯುವತಿಯ ವಿವಾಹ ನಿಂತು ಹೋಗಿದ್ದ ಪ್ರಕರಣಕ್ಕೆ ಆಕೆಯ ಪೋಷಕರೇ ತಿರುವು ಕೊಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯುವತಿ ಪೋಷಕರು ತಮ್ಮ ಮಗಳೇ ಸರಿ ಇಲ್ಲ ಎಂದು ಮಗಳ ವಿರುದ್ಧ ಆರೋಪ ಮಾಡಿದ್ದಾರೆ.
ಹಾಸನ(ಡಿ.3): 7 ವರ್ಷಗಳ ಕಾಲ ಪ್ರೀತಿಸಿ ಮದುವೆ ದಿನವೇ ವರ ಕೈಕೊಟ್ಟು ಹೋದ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಹಾಸನದ ಹೊಳೆನರಸೀಪುರದಲ್ಲಿ ಇಂದು ನಡೆಯಬೇಕಿದ್ದ ಬೆಂಗಳೂರು ಮೂಲದ ಯುವತಿಯ ವಿವಾಹ ನಿಂತು ಹೋಗಿದ್ದ ಪ್ರಕರಣಕ್ಕೆ ಆಕೆಯ ಪೋಷಕರೇ ತಿರುವು ಕೊಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಯುವತಿ ಪೋಷಕರು ತಮ್ಮ ಮಗಳೇ ಸರಿ ಇಲ್ಲ ಎಂದು ಮಗಳ ವಿರುದ್ಧ ಆರೋಪ ಮಾಡಿದ್ದಾರೆ. ಸಂದೇಶ್ ಶೆಟ್ಟಿ ಎಂಬಾತನನ್ನು ಮದುವೆಯಾಗಬೇಕಿದ್ದು, ಆತ ಮದುವೆ ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ಯುವತಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಸೇರಿದ್ದಳು.
ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂದೇಶ್ ಶೆಟ್ಟಿ, ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎನ್ನುವ ಅನುಮಾನದಿಂದ ತೊರೆಯುತ್ತಿರುವುದಾಗಿ ಕಾರಣ ನೀಡಿದ್ದಾನೆ. ಕೆಲ ದಿನಗಳ ಹಿಂದೆಯೂ ಕೂಡ ಹುಡುಗನ ಮನೆಗೆ ಕರೆಸಿಕೊಂಡು ವಿವಿಧ ರೀತಿಯ ಪ್ರಶ್ನೆ ಮಾಡಿ, ಯಾವುದೇ ರೀತಿಯಾದ ಸಮಸ್ಯೆಯಾದರೂ ಕೂಡ ಯಾರಿಗೂ ಹೇಳುವಂತಿಲ್ಲ. ಕೆಲಸಕ್ಕೂ ಹೋಗುವಂತಿಲ್ಲ ಎಂದು ತನಗೆ ಹೇಳಿದ್ದಾಗಿ ಯುವತಿ ದೂರಿದ್ದಳು.
