ದಿಲ್ಲಿಯ 11 ಮಂದಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

First Published 5, Jul 2018, 10:12 AM IST
New Twist For Delhi Family Sucide Case
Highlights

ದಿಲ್ಲಿಯಲ್ಲಿ 11 ಮಂದಿ ಆತ್ಮಹತ್ಯೆ ಮಾಡಿಕೊಂಡು ಪ್ರಕರಣಕ್ಕೆ ಇದೀಗ ಹೊಸ  ಟ್ವಿಸ್ಟ್ ಸಿಕ್ಕಿದೆ. ಇತ್ತೀಚೆಗಷ್ಟೇ ಇಲ್ಲಿನ ಬುರಾರಿಯಲ್ಲಿ ನೇಣು ಬಿಗಿದುಕೊಂಡು ಒಂದೇ ಕುಟುಂಬದ 11 ಸದಸ್ಯರ ಆತ್ಮಹತ್ಯೆ ಪ್ರಕರಣ ಸಂಬಂಧ ಮತ್ತಷ್ಟು ದಾಖಲೆಗಳು ಹೊರಬಿದ್ದಿವೆ. 

ನವದೆಹಲಿ: ಇತ್ತೀಚೆಗಷ್ಟೇ ಇಲ್ಲಿನ ಬುರಾರಿಯಲ್ಲಿ ನೇಣು ಬಿಗಿದುಕೊಂಡು ಒಂದೇ ಕುಟುಂಬದ 11 ಸದಸ್ಯರ ಆತ್ಮಹತ್ಯೆ ಪ್ರಕರಣ ಸಂಬಂಧ ಮತ್ತಷ್ಟು ದಾಖಲೆಗಳು ಹೊರಬಿದ್ದಿವೆ. 

ಮುಂದಿನ ನವೆಂಬರ್‌ನಲ್ಲಿ ಮದುವೆಗೆ ಸಿದ್ಧಗೊಂಡಿದ್ದ ಪ್ರಿಯಾಂಕಾ ಕುಜ ದೋಷಕ್ಕೆ ತುತ್ತಾಗಿರುವುದು ಕುಟುಂಬ ಸದಸ್ಯರನ್ನು ಆತಂಕಕ್ಕೆ ಈಡು ಮಾಡಿತ್ತು ಎಂಬ ವಿಷಯ ದಾಖಲೆಗಳಿಂದ ಬಹಿರಂಗವಾಗಿದೆ. 

ಆತ್ಮಹತ್ಯೆಗೆ ಶರಣಾದವರ ಪೈಕಿ ನಾರಾಯಣ್‌ ದೇವಿ(75)ಯ ಮೊಮ್ಮಗಳಾದ ಪ್ರಿಯಾಂಕಾ(33)ಳ ಜಾತಕದಲ್ಲಿ ಕುಜ ದೋಷ ಇತ್ತು. ಆಕೆಗೆ ಮುಂದಿನ ನವೆಂಬರ್‌ನಲ್ಲಿ ಮದುವೆ ನಿಶ್ಚಯವಾಗಿತ್ತು. 

ಹೀಗಾಗಿ ಮುಂದೇನು ಎಂಬುದರ ಬಗ್ಗೆ ಕುಟುಂಬ ಸದಸ್ಯರು ಬೇಸತ್ತಿರುವ ಸಂಗತಿ ದಾಖಲೆಗಳಲ್ಲಿ ಕಂಡುಬಂದಿದೆ.

loader